ಕ್ರೈಂ

ಸುಳ್ಯ: ಜೂನಿಯರ್ ಕಾಲೇಜು ಬಳಿ ಕಾರು-ಬೈಕ್ ಅಪಘಾತ, ಅದೃಷ್ಟವಶಾತ್ ಸವಾರರು ಸಣ್ಣಪುಟ್ಟ ಗಾಯಗಳಿಂದ ಪಾರು

245

ನ್ಯೂಸ್ ನಾಟೌಟ್: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಸುಳ್ಯದ ಜೂನಿಯರ್ ಕಾಲೇಜು ಬಳಿ ಸೋಮವಾರ ಸಂಜೆ 4.30ಕ್ಕೆ ನಡೆದಿದೆ. ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಅಪಘಾತ ನಡೆದಿದೆ. ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಕಾರಿನ ಎಡಬದಿಯ ಮುಂದಿನ ಡೋರ್ ಬಳಿ ಸಣ್ಣ ಪ್ರಮಾಣದ ಜಖಂ ಉಂಟಾಗಿದೆ ಎಂದು ತಿಳಿದು ಬಂದಿದೆ. ಜೂನಿಯರ್ ಕಾಲೇಜಿನಿಂದ ಕೆವಿಜಿಗೆ ಸಂಪರ್ಕಿಸುವ ರಸ್ತೆ ಅತ್ಯಂತ ಕಿರಿದಾಗಿದೆ. ವಾಹನ ಸವಾರರಿಗೆ ಈ ದಾರಿ ಕಿರಿಕಿರಿ ಅನಿಸುತ್ತದೆ. ಸಂಜೆ ಮತ್ತು ಬೆಳಗ್ಗಿನ ಸಮಯದಲ್ಲಿ ಶಾಲೆ, ಕಾಲೇಜು ಮಕ್ಕಳು ಹೆಚ್ಚಾಗಿ ನಡೆದುಕೊಂಡು ಹೋಗುವ ದಾರಿಯಾಗಿದ್ದು ಇಲ್ಲಿನ ಎರಡೂ ಬದಿಗಳಲ್ಲೂ ಕೂಡ ಸರಿಯಾದ ಪಾದಾಚಾರಿ ವ್ಯವಸ್ಥೆಯೂ ಇಲ್ಲ. ಎಲ್ಲರೂ ರಸ್ತೆಯ ಮೇಲೆಯೇ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಇದು ಮುಂದಿನ ದಿನಗಳಲ್ಲಿ ಅಪಾಯವನ್ನು ಸೃಷ್ಟಿಸಬಹುದು. ಹೀಗಾಗಿ ಇದನ್ನು ಸರಿಪಡಿಸಬೇಕಿರುವ ಅವಶ್ಯಕತೆ ಇದೆ.

See also  ಸೌಜನ್ಯ ಪ್ರಕರಣ: ಮರು ತನಿಖೆಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್..! ಸೌಜನ್ಯ ಪೋಷಕರಿಗೆ ಭಾರೀ ಹಿನ್ನಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget