ಕರಾವಳಿಕ್ರೈಂ

ಸುಳ್ಯ: ಬೇಂಗಮಲೆ ಬಳಿ ಸರಣಿ ಅಪಘಾತ, ಇನ್ನೋವಾ, ನೆಕ್ಸಾನ್ , ಟಿಪ್ಪರ್ ನಡುವೆ ಪರಸ್ಪರ ಅವಘಡ ಸಂಭವಿಸಿದ್ದು ಹೇಗೆ..?

ನ್ಯೂಸ್ ನಾಟೌಟ್: ಸುಳ್ಯದ ಸಮೀಪದ ಬೇಂಗಮಲೆ ಬಳಿ ಇಂದು (ಮೇ೨೯) ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದೆ.

ಇನ್ನೋವಾ ಕಾರು, ನೆಕ್ಸಾನ್ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ನಡೆದಿದೆ. ಆಂದ್ರಪ್ರದೇಶ ನೋಂದಣಿಯ ಇನ್ನೋವಾ ಕಾರು ಪ್ರಯಾಣಿಕರನ್ನು ಕರೆದುಕೊಂಡು ಬೆಳ್ಳಾರೆಯತ್ತ ತೆರಳುತ್ತಿತ್ತು. ಇದರ ಹಿಂದೆ ಇನ್ನೋವಾ ಕಾರು ಕೂಡ ಬೆಳ್ಳಾರೆಯತ್ತ ತೆರಳುತ್ತಿತ್ತು. ಬೇಂಗಮಲೆ ಬಳಿ ಇನ್ನೋವಾ ಕಾರು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಅಪ್ ನಲ್ಲಿ ರಿವರ್ಸ್ ಬಂದಿದೆ. ರಿವರ್ಸ್ ಬಂದ ಕಾರು ಪಕ್ಕದ ಕಣಿಗೆ ಬಂದು ಬಿದ್ದಿದೆ. ಇದನ್ನು ನೋಡಿದ ಹಿಂದಿನಿಂದ ಬರುತ್ತಿದ್ದ ನೆಕ್ಸಾನ್ ಕಾರಿನ ಚಾಲಕ ವಿಚಲಿತಗೊಂಡಿದ್ದಾನೆ. ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಎದುರಿಗೆ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿಯಾಗಿದೆ. ಟಿಪ್ಪರ್ ಚಾಲಕ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ನೆಕ್ಸಾನ್ ಕರೆಂಟ್ ಕಂಬಕ್ಕೆ ಎಳೆದು ಕಟ್ಟುವ ಸ್ಟೇ ತಂತಿಗೆ ಗುದ್ದಿದ್ದರಿಂದ ವಿದ್ಯುತ್ ತಂತಿ ತುಂಡಾಗಿದೆ. ಕಾರು ಜಖಂಗೊಂಡಿದೆ. ಈ ಅವಘಡದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

Related posts

ಗೇಮಿಂಗ್​ ಆ್ಯಪ್ ​ನಲ್ಲಿ 1.5 ಕೋಟಿ ರೂ. ಗೆದ್ದದ್ದು ಹೇಗೆ ಪೊಲೀಸ್ ಅಧಿಕಾರಿ..? ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಪಿಎಸ್​ಐ ಹೇಳಿದ್ದೇನು?

ಲಿವ್‌ ಇನ್‌ ಗೆಳತಿ ಕುಕ್ಕರ್ ನಲ್ಲಿ ಬೆಂದ ಪ್ರಕರಣ,ದೃಶ್ಯ ಕಂಡು ವಾಂತಿ ಮಾಡಿದ್ದ ಪೊಲೀಸರು,ಆರೋಪಿಗಿತ್ತು ಅಶ್ಲೀಲ ಚಿತ್ರ ವೀಕ್ಷಣೆಯ ಚಟ!

ಪತ್ನಿಯ ಕತ್ತಿಗೆ ಟವೆಲ್ ಬಿಗಿದು ಹತ್ಯೆಗೈದ ಪತಿ..! ಆರೋಪಿ ಅರೆಸ್ಟ್..!