ಕ್ರೈಂ

ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಗುದ್ದಿ ಪರಾರಿಯಾದ ಬೈಕ್ ಚಾಲಕ

ಸುಳ್ಯ: ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಬೈಕ್ ಗುದ್ದಿ, ಬೈಕ್ ಸವಾರ ಪರಾರಿಯಾದ ಘಟನೆ ಸುಳ್ಯದ ಬೋರುಗುಡ್ಡೆ ಬಳಿ ನಡೆದಿದೆ.

ಸುಳ್ಯದ ಬೋರುಗುಡ್ಡೆ ನಿವಾಸಿ ಶರೀಫ್ ರವರ ಪುತ್ರ ಹಾಮಿದ್ (1೦ ವರ್ಷ) ಎಂಬಾತ ಅನ್ಸಾರಿಯ ಅನಾಥಾಲಯದ ಹಿಂಬದಿಯಲ್ಲಿರುವ ತನ್ನ ಗೆಳೆಯನ ಮನೆಗೆ ಹೋಗಿ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ಬಾಲಕನಿಗೆ ಬೈಕ್ ಗುದ್ದಿದ ನಂತರ ಸವಾರ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಗಾಯಗೊಂಡ ಬಾಲಕನನ್ನು ಸ್ಥಳೀಯರು ಕೂಡಲೇ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Related posts

ವಿದ್ಯುತ್ ಶಾಕ್ ಗೆ ೪ ವರ್ಷದ ಬಾಲಕ ಬಲಿ..!

ಬೆಂಗಳೂರಿನಲ್ಲಿ ಮಹಿಳೆಯನ್ನು 30 ಪೀಸ್ ಮಾಡಿ ಬರ್ಬರ ಹತ್ಯೆ, ಸಿಂಗಲ್ ಡೋರ್ ಪ್ರಿಡ್ಜ್ ನಿಂದ ಹೊರ ಬರುತ್ತಿತ್ತು ದುರ್ನಾತ..!

ಮಂಗಳೂರು: ಮೆಸ್ಕಾಂ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ! ಇಲ್ಲಿದೆ ವಿಡಿಯೋ