ನ್ಯೂಸ್ ನಾಟೌಟ್: ಹೊಂಡ ಗುಂಡಿಗಳಿರುವ ರಸ್ತೆ ಹಾಗೂ ಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ ಮತ್ತು ಬ್ರಹ್ಮರಕೋಟ್ಲು ಟೋಲ್ ನಲ್ಲಿ ತುರ್ತು ವಾಹನಗಳಿಗೆ ಅಡಚಣೆಯಿಂದಾಗಿ ಆಂಬ್ಯುಲೆನ್ಸ್ ನಲ್ಲಿ ರೋಗಿಯನ್ನು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆಂಬ್ಯುಲೆನ್ಸ್ ಚಾಲಕರ ಮಾಲಕರ ಸಂಘ ಸುಳ್ಯ ತಾಲೂಕು ಸದಸ್ಯರು ಮೇ 23 ರಂದು ಜಿಲ್ಲಾಧಿಕಾರಿಯವರಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ಗಾಂಧಿನಗರ ಭಾಗದಲ್ಲಿ ರಸ್ತೆ ನಡುವೆ ಇರುವ ಗುಂಡಿಗಳ ಪರಿಣಾಮ ವಾಹನ ಸಂಚಾರಕ್ಕೆ ಭಾರಿ ತೊಂದರೆಯಾಗಿದೆ.ಅದಲ್ಲದೇ ಮಾಣಿಯಿಂದ ಬಿ.ಸಿ.ರೋಡ್ ವರೆಗೆ ರಸ್ತೆ ಕಾಮಗಾರಿಯಿಂದಲೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮುಖ್ಯವಾಗಿ ಆಂಬ್ಯುಲೆನ್ಸ್ ನಲ್ಲಿ ತುರ್ತು ರೋಗಿಯನ್ನು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಎಲ್ಲಾ ಸಮಸ್ಯೆಯನ್ನು ಪರಿಗಣಿಸಿ ಕೂಡಲೇ ಪರಿಹಾರ ಮಾಡಿಕೊಡಬೇಕೆಂದು ವಿನಂತಿಸಿದರು.
ತುರ್ತು ಸಂದರ್ಭಗಳಲ್ಲಿ ಬ್ರಹ್ಮರಕೋಟ್ಲು ಟೋಲ್ ನಲ್ಲಿ ಎಮರ್ಜೆನ್ಸಿ ವೇ ತೆರೆಯಲು ಟೋಲ್ ಸಿಬ್ಬಂದಿತಡ ಮಾಡುತ್ತಿದ್ದು ಹಾಗೂ ಎಮರ್ಜೆನ್ಸಿ ವೇನಲ್ಲಿ ಇರುವ ಹಂಪ್ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಯವರಿಗೆ ಮನವಿ ಮಾಡಿದರು.ಈ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಜೂನ್ 1 ರೊಳಗೆ ಎಲ್ಲ ಸಮಸ್ಯೆ ಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.