ಕೊಡಗುಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಬಟ್ಟೆ ಒಗೆಯಲು ಪಯಸ್ವಿನಿ ನದಿ ನೀರಿಗಿಳಿದ ಯುವಕ ಸಾವು, ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಮೃತ ದೇಹ ಹೊರಕ್ಕೆ ತೆಗೆದ ಸುಳ್ಯದ ಆಂಬ್ಯುಲೆನ್ಸ್ ಚಾಲಕರು

235

ನ್ಯೂಸ್ ನಾಟೌಟ್: ಬಟ್ಟೆ ಒಗೆಯಲೆಂದು ಸುಳ್ಯದ ಭಸ್ಮಡ್ಕದಲ್ಲಿ ಹರಿಯುತ್ತಿರುವ ಪಯಸ್ವಿನಿ ನದಿ ನೀರಿಗೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಸುಳ್ಯದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯದ ವಿಶನ್ ಅಪ್ಟಿಕಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಉಪ್ಪಳದ ಸಮೀರ್ ಎಂದು ಗುರುತಿಸಲಾಗಿದೆ.

ಸಮೀರ್ ಮತ್ತು ಸ್ನೇಹಿತರು ರಜೆ ಹಿನ್ನೆಲೆಯಲ್ಲಿ ಬಟ್ಟೆ ಒಗೆಯುವುದಕ್ಕಾಗಿ ಪಯಸ್ವಿನಿ ನದಿ ನೀರಿಗೆ ಬರುತ್ತಾರೆ. ಈ ವೇಳೆ ಅವರು ಸ್ನಾನಕ್ಕೆಂದು ನೀರಿಗಿಳಿದಾಗ ಅವಘಡ ಸಂಭವಿಸಿದೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಸುಳ್ಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಈ ವೇಳೆ ನೀರಿಗಿಳಿದ ಸುಳ್ಯದ ಆಂಬ್ಯುಲೆನ್ಸ್ ಚಾಲಕರು ಸತತ ಮೂರು ಗಂಟೆ ನೀರಿನಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ನೀರಿನಿಂದ ಹೊರ ತೆಗೆಯಲಾಯಿತು ಎಂದು ಆಂಬ್ಯುಲೆನ್ಸ್ ಚಾಲಕರು ತಿಳಿಸಿದ್ದಾರೆ.

https://newsnotout.com/2023/12/muslim-family-converted-to-hindu-d/embed/#?secret=bCUzAmhvRA#?secret=BvUD7tJMfO

Follow us for more updates:

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube https://www.youtube.com/@newsnotout8209

Koo apphttps://www.kooapp.com/profile/NewsNotOut

Website : https://newsnotout.com/

See also  ಪೆರಾಜೆಯ ಯುವಕನಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget