ಕರಾವಳಿಸುಳ್ಯ

ಸುಳ್ಯ: ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..!

ನ್ಯೂಸ್ ನಾಟೌಟ್ : ಆ್ಯಂಬುಲೆನ್ಸ್‌ನಲ್ಲಿಯೇ ತಾಯಿಯೊಬ್ಬರು ತಮ್ಮ ಶಿಶುವಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ.ಮನೆಯಲ್ಲಿ ಹೆರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತೆಂದು ಮಹಿಳೆಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು.ಈ ವೇಳೆ ಅವರು ದಾರಿ ಮಧ್ಯೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಪಂಜ ಭಾಗದಿಂದ ವರದಿಯಾಗಿದ್ದು,ಇಂದು(ನ.9.ರಂದು) ಸಂಭವಿಸಿದೆ.ಮಹಿಳೆ ಗಾಯತ್ರಿ ಎಂಬವರು ಸುರೇಶ್ ಎಂಬವರ ಪತ್ನಿ.ಗಾಯತ್ರಿ ಅವರನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ದಯಾನಂದ ಬೇರ್ಯರವರು ಅಂಬ್ಯುಲೆನ್ಸ್‌ನಲ್ಲಿ ಕಡಬ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗುತ್ತಿದ್ದರು.ಆದರೆ ಕಡಬ ತಲುಪುವ ಮುನ್ನವೇ ಪುಳಿಕುಕ್ಕು ಎಂಬಲ್ಲಿ ಈ ಘಟನೆ ನಡೆದಿದೆ.

ಇದೀಗ ಅವರನ್ನು ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ,ಮಗು ಕ್ಷೇಮವಾಗಿದ್ದಾರೆಂದು ತಿಳಿದು ಬಂದಿದೆ.

Related posts

ಕೊಡಗು-ಸಂಪಾಜೆ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಂಪಾಜೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ

ಕಾರ್ಕಳ: ಮದ್ಯದಲ್ಲಿ ಮಾದಕ ವಸ್ತು ಬೆರೆಸಿ ಅತ್ಯಾಚಾರ..! ಗ್ಯಾಂಗ್‌ರೇಪ್‌ ನಡೆದಿದೆ ಎಂದ ಹಿಂದೂ ಸಂಘಟನೆಗಳು..! ಅಲ್ತಾಫ್ ಬಂಧನ

ಎನ್.ಸಿ.ಐ.ಎಸ್.ಎಂ. ಕಾರ್ಯಾಗಾರದಲ್ಲಿ ಸುಳ್ಯ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಹರ್ಷವರ್ಧನ್‌ ಕೆ. ಭಾಗಿ