ಕರಾವಳಿಸುಳ್ಯ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ, ಸುಳ್ಯ-ಕಡಬ ತಾಲೂಕಿನ ಆಯ್ದ ಶಾಲೆಗಳಿಗೆ ರಜೆ ಘೋಷಣೆ

94
Spread the love

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯ ಭೀತಿ ಇರುವ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಆಯ್ದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ, ಎಸ್ ಎಸ್ ಪಿ ಯು ಸುಬ್ರಹ್ಮಣ್ಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ವಾಲ್ಮೀಕಿ ಆಶ್ರಮ ಶಾಲೆ ಸುಬ್ರಹ್ಮಣ್ಯ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವರಹಳ್ಳಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಲ್ಕುಂದ ಹಾಗೂ ಹರಿಹರ ಕ್ಲಸ್ಟರ್ ನ ಎಲ್ಲಾ ಶಾಲೆಗಳಿಗೆ ಆಡಳಿತ ಮಂಡಳಿ ರಜೆ ನೀಡಿದೆ. ಉಳಿದಂತೆ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ರಜೆ ನೀಡಲಾಗಿದೆ.

ಇದೇ ವೇಳೆ ಕಡಬ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕಡಬ ತಹಶಿಲ್ದಾರ್ ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ. ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಉಳಿದಂತೆ ತಾಲೂಕಿನ ಪಿಯು‌ ಮತ್ತು ಪದವಿ ಕಾಲೇಜುಗಳು ನಡೆಯಲಿದೆ.

ಹಯತುಲ್ ಶಾಲೆ ಗೂಡಿನ ಬಳಿ, ಕಿರಿಯ ಪ್ರಾಥಮಿಕ ಶಾಲೆ ವಳವೂರು, ಶಾರದ ಮತ್ತು ಎಸ್ ಎಲ್ ಎನ್ ಪಿ ಪಾಣೆಮಂಗಳೂರು ,ಎಲ್ ಸಿ ಆರ್ ಕಕ್ಕೆ ಪದವು, ಕೆಪಿಎಸ್ ಮೊಂಟೆಪದವು, ಕುನಿಲ್ ಶಾಲೆ ತುಂಬೆ. ಬಿ ಎ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಪೆರ್ಲಬಿಯಪಾದೆ ಶಾಲೆ, ಸರಪಾಡಿ ಪ್ರೈಮರಿ ಶಾಲೆ, ಹೆಗಡೆ ಶಾಲೆ, ಪೂಪಾಡಿ ಕಟ್ಟಿ ಶಾಲೆ, ದಡ್ಡಲಕಾಡು, ಎರ್ಮಾಳ್ ಪದವು ಮಜ್ಲಿಸ್ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಬಂಟ್ವಾಳ ತಾಲೂಕು ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.

See also  ಸುಳ್ಯ:ರಸ್ತೆ ಕಾಮಗಾರಿಯನ್ನು ಕೂಡಲೇ ಆರಂಭಿಸಿ,ಇಲ್ದಿದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ;6 ಗ್ರಾಮಗಳಿಗೆ ತೆರಳುವ ರಸ್ತೆಯೆದುರು ಬೃಹತ್ ಬ್ಯಾನರ್ ಪ್ರತ್ಯಕ್ಷ..!
  Ad Widget   Ad Widget   Ad Widget   Ad Widget   Ad Widget   Ad Widget