Latestಕರಾವಳಿಕ್ರೈಂಮಂಗಳೂರುರಾಜಕೀಯ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮಂಗಳೂರಿಗೆ ಬಂದ ಗೃಹ ಸಚಿವ..! ಮುಸ್ಲಿಂ ಮುಖಂಡರು ಮತ್ತು ಪೊಲೀಸರ ಜೊತೆ ಸಭೆ..!

1k

ನ್ಯೂಸ್ ನಾಟೌಟ್: ಕರಾವಳಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಮತ್ತು ಅದರ ಹಿಂದಿನ ಹತ್ಯೆ ಮತ್ತು ಬಳಿಕ ನಡೆದ ಘಟನೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ| ಜಿ.ಪರಮೇಶ್ವರ್ ಶನಿವಾರ (ಮೇ 03) ಮಂಗಳೂರಿಗೆ ಆಗಮಿಸಿ ಸಭೆ ನಡೆಸುತ್ತಿದ್ದಾರೆ.

ಉಸ್ತುವಾರಿ‌ ಸಚಿವ ದಿನೇಶ್ ಗುಂಡೂರಾವ್ ಮತ್ತು ಸಚಿವ ಪರಮೇಶ್ವರ್‌ ವಿಮಾನ ನಿಲ್ದಾಣದಿಂದ ಸರ್ಕೀಟ್ ಹೌಸ್ ಗೆ ಆಗಮಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ‌ ಮಾಹಿತಿ ಪಡೆದ ಗೃಹ ಸಚಿವರು ಬಳಿಕ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದರು.

ಬಳಿಕ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.
ಎಡಿಜಿಪಿ ಹಿತೇಂದ್ರ ಆರ್, ಪಶ್ಚಿಮ‌ ವಲಯ ಐಜಿಪಿ ಅಮಿತ್ ಸಿಂಗ್ ಪೊಲೀಸ್ ಕಮೀಷನರ್ ಅನುಪಮ ಅರ್ಗವಾಲ್, ಎಸ್.ಪಿ ಯತೀಶ್ ಎನ್ ಭಾಗಿಯಾಗಿದ್ದರು.

 

See also  ಉಡುಪಿ ಕೃಷ್ಣ ಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಅಚ್ಚರಿ ಮೂಡಿಸಿದ ಸ್ಪೀಕರ್ ಖಾದರ್! ಕೃಷ್ಣ ಹುಟ್ಟಿದ ಸಮಯಕ್ಕೆ ಖಾದರ್ ಭೇಟಿ ನೀಡಿದ್ದೇಕೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget