Latestಕರಾವಳಿಕ್ರೈಂರಾಜಕೀಯರಾಜ್ಯ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಎನ್.ಐ.ಎ ತನಿಖೆ ಅಗತ್ಯ ಇಲ್ಲ ಎಂದ ಗೃಹಸಚಿವ..! ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್‌ ಗಳು ಇವೆ ಹಾಗಾಗಿ ಸಾಂತ್ವನ ಹೇಳಲು ಮನೆಗೆ ಹೋಗಿಲ್ಲ ಎಂದ ಜಿ.ಪರಮೇಶ್ವರ್..!

627

ನ್ಯೂಸ್ ನಾಟೌಟ್ : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ(NIA) ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು(ಮೇ.4) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ ಐಎಗೆ ವಹಿಸಲು ಬಿಜೆಪಿ ನಾಯಕರು ಹೇಳುತ್ತಿರುವುದು ಅವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಎಂಟು ಜನರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ ಈ ಪ್ರಕರಣ ಎನ್ ಐಎಗೆ ಕೊಟ್ಟಿಲ್ಲ ಅದರ ಅಗತ್ಯವೂ ಇಲ್ಲ ಎಂದಿದ್ದಾರೆ.

ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸರ್ಕಾರದಿಂದ ಭೇಟಿ ನೀಡಿ ಯಾರೂ ಸಾಂತ್ವನ ಹೇಳದ ವಿಚಾರ ಬಗ್ಗೆ ಮಾತಾಡಿದ ಪರಮೇಶ್ವರ್, ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್‌ ಗಳು ಇವೆ. ಹಾಗಾಗಿ ನಾವು ಹಾಗೂ ಭೇಟಿ ಕೊಟ್ಟಿಲ್ಲ. ಆದರೆ ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದ್ದಾರೆ.

ಇದು ಪ್ರತೀಕಾರಕ್ಕೆ ನಡೆದಿದೆಯಾ ಇಲ್ವಾ ಎನ್ನುವುದು ಗೊತ್ತಿಲ್ಲ. ಏನೇ ಕಾರಣ ಇದ್ದರೂ ತನಿಖೆ ನಡೆಸಿದ ಮೇಲೆ ಗೊತ್ತಾಗುತ್ತದೆ. ನಾವು ಊಹೆ ಮಾಡಿ‌ ಇದೇ ಕಾರಣ ಅಂತ ಹೇಳಲು ಬರುವುದಿಲ್ಲ. ತನಿಖೆ ಮುಗಿಯೋವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದರು.

ಪಾಕ್ ಗೆ ಮತ್ತೆರಡು ನದಿಗಳ ನೀರಿನ ಹರಿವನ್ನು ನಿಲ್ಲಿಸಿದ ಭಾರತ..! ಇಂದು(ಮೇ.4) ಮೋದಿಯನ್ನು ಭೇಟಿಯಾದ ವಾಯುಪಡೆ ಮುಖ್ಯಸ್ಥ..!

700 ಅಡಿ ಆಳಕ್ಕೆ ಬಿದ್ದ ಸೇನಾ ವಾಹನ..! 3 ಯೋಧರು ಸಾವು..!

ಉಡುಪಿಗೆ ಬಂದ ಭೂಗತ ಪಾತಕಿ ಬನ್ನಂಜೆ ರಾಜಾ..! 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವಾತನಿಗೆ 12 ದಿನ ಪೆರೋಲ್ ರಜೆ..!

ಸುಹಾಸ್‌ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಮುಖಂಡನಿಗೆ ಜೀವ ಬೆದರಿಕೆ..! ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್..!

ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿದ್ದ CRPF​ ಯೋಧ ಸೇವೆಯಿಂದ ವಜಾ..! ವೀಸಾ ಅವಧಿ ಮುಗಿದಿದ್ದರೂ ಆಕೆಯನ್ನು ಭಾರತದಲ್ಲೇ ಬಚ್ಚಿಟ್ಟಿದ್ದ ಜವಾನ..!

See also  ಕಡಬ: ದೇಶ ಕಾಯುವ ಸೈನಿಕನ ಬೆಂಬಲಕ್ಕೆ ನಿಂತ ಮಾಜಿ ಸೈನಿಕರ ಸಂಘ, ಸರಕಾರಕ್ಕೆ ಗಡುವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget