ಕರಾವಳಿಸುಳ್ಯ

ಸುಬ್ರಹ್ಮಣ್ಯ:  ಕೇರಳ ನೋಂದಾವಣಿ ಬೈಕ್ ನಲ್ಲಿ ತಲವಾರು ಹಿಡಿದು ಹೋದರೆಂಬ ಗಾಳಿ ಸುದ್ದಿ..! ಜನ ಗಾಬರಿಗೆ ಓಡೋಡಿ ಬಂದ ಪೊಲೀಸರಿಗೆ ಎದುರಾಗಿದ್ದೇ ದೊಡ್ಡ ಶಾಕ್..!

ನ್ಯೂಸ್ ನಾಟೌಟ್: ಕೇರಳ ನೋಂದಾವಣಿ ಬೈಕ್ ನಲ್ಲಿ ಮೂವರು ತಲವಾರು ಹಿಡಿದು ಹೋದರೆಂಬ ಗಾಳಿ ಸುದ್ದಿಯೊಂದು ಸುಳ್ಯ ತಾಲೂಕಿನ ಹರಿಹರ ಗ್ರಾಮದ ಕಲ್ಲೇಮಠ ಎಂಬಲ್ಲಿ ಗುರುವಾರ ಭಾರಿ ಸಂಚಲನಕ್ಕೆ ಕಾರಣವಾಯಿತು. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಸತ್ಯ ವಿಷಯ ತಿಳಿದು ಭಾರಿ ಶಾಕ್ ಗೆ ಒಳಗಾಗುವಂತಾಯಿತು. ಸುಬ್ರಹ್ಮಣ್ಯ ಠಾಣೆ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಸತ್ಯ ಹೊರಗೆ ಬಂದು ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.

ಸುಳ್ಯ ತಾಲೂಕಿನ ಹರಿಹರ ಗ್ರಾಮದ ಕಲ್ಲೇಮಠ ಎಂಬಲ್ಲಿ ಕೇರಳ ನೋಂದಾವಣಿ ದ್ವಿಚಕ್ರ ವಾಹನದಲ್ಲಿ ಮೂವರು ಶಂಕಿತರು ತಲವಾರು ಹಿಡಿದುಕೊಂಡು ಓಡಿ ಹೋಗಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರೊಬ್ಬರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಿಳಿಸಿದರು. ವಿಚಾರ ತಿಳಿದ ತಕ್ಷಣ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಘಟನಾ ಸ್ಥಳಕ್ಕೆ ಬಂದರು. ಸಾರ್ವಜನಿಕರ ಸಹಾಯದಿಂದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಲಾಯಿತು.  ಈ ವೇಳೆ ಸ್ವಾರಸ್ಯಕರ ವಿಚಾರ ತಿಳಿದು ಬಂದಿತು. ಕೇರಳ ಮೂಲದ ವ್ಯಕ್ತಿ ಅನ್ನುವುದು ನಿಜ. ಆದರೆ ಆತ ಸ್ಥಳೀಯ ರಬ್ಬರ್ ತೋಟವೊಂದರಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದವ. ಮೀನು ಹಿಡಿಯುವುದಕ್ಕೆಂದು ತೆರಳುವ ವೇಳೆ ಉದ್ದದ ಕತ್ತಿಯನ್ನು ಕೊಂಡುಹೋದ ಕಾರಣ ಜನ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸಾರ್ವಜನಿಕರು ದೂರು ನೀಡಿದ ಕೆಲವೇ ಸಮಯದಲ್ಲಿ ಘಟನಾ ಸ್ಥಳಕ್ಕೆ ತಕ್ಷಣ ಬಂದು ವಿಷಯನ್ನು ಬಗೆ ಹರಿಸಿದ ಸುಬ್ರಹ್ಮಣ್ಯ ಠಾಣಾಧಿಕಾರಿಯವರ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ತಿಂಗಳಿಂದ ಕೊಲ್ಲಮೊಗ್ರ- ಹರಿಹರ ಭಾಗಗಳಲ್ಲಿ ಕಟ್ಟು ನಿಟ್ಟಿನ ಕಾನೂನಿನ ಮೂಲಕ ಜನರಲ್ಲಿ ಒಂದು ರೀತಿಯ ಭರವಸೆಯನ್ನು ಹುಟ್ಟು ಹಾಕಿರುವ ಪೊಲೀಸ್ ಅಧಿಕಾರಿ ಕಾರ್ತಿಕ್ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆಂದು ಜನ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Related posts

ಅರಂತೋಡು: ಜನಮೆಚ್ಚಿದ ಶಿಕ್ಷಕಿಗೆ ಇಡೀ ಊರವರಿಂದಲೇ ವಿದಾಯ ಸಮಾರಂಭ, ಸುಮಾರು 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನ, ನಿವೃತ್ತ ಜೀವನಕ್ಕೆ ಶುಭಾಶಯಗಳ ಸುರಿಮಳೆ

ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆ, ಓರ್ವ ನಾಪತ್ತೆ, ಮತ್ತೋರ್ವ ಗಂಭೀರ

ಅರಂತೋಡು : ಭೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ