ಸುಳ್ಯ

ಅತ್ಯಾಚಾರಿ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಿ: ಸುಬ್ರಹ್ಮಣ್ಯದ ಎಬಿವಿಪಿ ಘಟಕ ಆಗ್ರಹ

1.1k

ಸುಬ್ರಹ್ಮಣ್ಯ: ಅತ್ಯಾಚಾರ ಆರೋಪಿ ಶಿಕ್ಷಕ ಗುರುರಾಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಸುಬ್ರಹ್ಮಣ್ಯ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸುಬ್ರಹ್ಮಣ್ಯ ಪ್ರೌಢಶಾಲಾ ವಠಾರದಲ್ಲಿ ಸಾಂಕೇತಿಕ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಲಾಯಿತು.

ಕೆಎಸ್ಎಸ್ ಕಾಲೇಜಿನ ಎಬಿವಿಪಿ ಪ್ರಮುಖರಾಗಿರುವ ಸೌಮ್ಯ ಕುಂತೂರು, ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಆರೋಪಿ ಶಿಕ್ಷಕನ ಬಗ್ಗೆ ವಿವಿಧ ಆಯಾಮಗಳಿಂದ ತನಿಖೆ ನಡೆಸಬೇಕು. ಶಿಕ್ಷಕ ಹುದ್ದೆಯಿಂದಲೇ ಆತನನ್ನು ವಜಾ ಮಾಡುವಂತೆ ಪ್ರತಿಭಟನ ಕಾರರು ಆಗ್ರಹಿಸಿದರು.  ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಂದಾರ ಬಾಳುಗೋಡು, ಜಿಲ್ಲಾ ಸಂಚಾಲಕ ಹಿತೇಶ್ ಕಟ್ರಮನೆ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಎಬಿವಿಪಿ ಘಟಕದ ಸದಸ್ಯರು ಭಾಗವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ಇಲ್ಲಿನ ಪ್ರೌಢ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಪ್ರಾಜೆಕ್ಟ್‌ ಮಾಡಿ ಕೊಡುವ ಉದ್ದೇಶದಿಂದ ಮನೆಗೆ ಬರಲು ಹೇಳಿ ಅತ್ಯಾಚಾರ ನಡೆಸಿದ್ದ. ಬಳಿಕ ಆಕೆಯ ಫೋಟೋವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದ. ಆಗಾಗ ಬಂದು ತನ್ನ ಜತೆ ದೈಹಿಕ ಸಂಬಂಧ ಇಟ್ಟುಕೊಳ್ಳಬೇಕೆಂದು ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ದೂರು ನೀಡಲಾಗಿ ಆತನನ್ನು ಬಂಧಿಸಲಾಗಿತ್ತು.

See also  10 ರೂ. ನಾಣ್ಯದಿಂದಲೇ 1 ಲಕ್ಷ ರೂ. ಸಂಗ್ರಹಿಸಿ ಸ್ಕೂಟಿ ಖರೀದಿಸಿದ ಮಹಿಳೆ..! ಚಿಲ್ಲರೆ ರಾಶಿಯನ್ನು ಕಂಡು ದಂಗಾದ ಶೋ ರೂಮ್ ಸಿಬ್ಬಂದಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget