ಕರಾವಳಿವೈರಲ್ ನ್ಯೂಸ್

ಸುಬ್ರಹ್ಮಣ್ಯ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ..! ಮಂಗಳೂರಿನಲ್ಲಿ ಯುವತಿ ಪತ್ತೆಯಾಗಿದ್ದು ಹೇಗೆ..?

269

ನ್ಯೂಸ್ ನಾಟೌಟ್: ಬಳ್ಪ ಗ್ರಾಮದ ಬೀದಿ ಗುಡ್ಡೆಯಿಂದ ಕಾಣೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಇದೀಗ ಮಂಗಳೂರಿನಲ್ಲಿ ಸಿಕ್ಕಿದ್ದಾಳೆ. ವಾರದ ಹಿಂದೆಯಷ್ಟೇ ಯುವತಿ ನಾಪತ್ತೆಯಾಗಿರುವ ಕುರಿತು ಪ್ರಕರಣ ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾಗಿತ್ತು.

ಇದೀಗ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಯುವತಿ ಉದ್ಯೋಗದಲ್ಲಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ದೀಕ್ಷಾ (18 ವರ್ಷ) ಮನೆಯಲ್ಲಿ ಹೇಳದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಮನೆಯವರು ತೀವ್ರ ಆತಂಕಕ್ಕೀಡಾಗಿ ಪೊಲೀಸ್ ದೂರು ನೀಡಿದ್ದರು. ಚುರುಕಿನ ಕಾರ್ಯಾಚರಣೆ ನಡೆಸಿದ ಸುಬ್ರಹ್ಮಣ್ಯ ಪೊಲೀಸರು ಆಕೆಯನ್ನು ಮಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ.

ಈಕೆ ಕೌಟುಂಬಿಕ ಕಲಹದಿಂದ ಮನೆಬಿಟ್ಟು ಹೋಗಿದ್ದಾಳೆ ಅನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇದೀಗ ಪೊಲೀಸರು ಈ ವಿಚಾರವನ್ನು ಮನೆಯವರಿಗೆ ತಿಳಿಸಿ ಆಕೆಯ ಮನವೊಲಿಸಿ ಮನೆಗೆ ಕರೆ ತರುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

See also  ಸಂಪಾಜೆ: ಪಿಕಪ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಕಾಲಿಗೆ ಗಂಭೀರ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget