ಕರಾವಳಿ

ನಾಪತ್ತೆಯಾದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಬೆಂಗಳೂರಿನಲ್ಲಿ ಪತ್ತೆ?

ನ್ಯೂಸ್ ನಾಟೌಟ್ : ಎರಡು ದಿನಗಳ ಹಿಂದೆಯಷ್ಟೇ ನಾಪತ್ತೆಯಾಗಿರುವ ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲ (33) ಬೆಂಗಳೂರಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಭಾರತಿಯವರು ಈಶ್ವರಮಂಗಲದ ವ್ಯಕ್ತಿಯೋರ್ವರನ್ನು ಕಾಣಲು ಬೆಂಗಳೂರಿಗೆ ತೆರಳಿದ್ದಾರೆಂದು ಹೇಳಲಾಗುತ್ತಿದೆ.

ಭಾರತಿ ಮೂಕಮಲ ಎಂಬವರು ಅ.29 ರಂದು ಕಾಣೆಯಾಗಿರುವುದಾಗಿ ಭಾರತಿಯವರ ಪತಿ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.  ಪತ್ನಿ ಅ.29 ಮಧ್ಯಾಹ್ನ ತನಕ ಕೆಲಸಕ್ಕೆ ಹೋಗಿ ಬಳಿಕ ಮರಳಿ ಮನೆಗೆ ಹೋಗಿ ತಾಯಿ ಸರಸ್ವತಿ ಹಾಗೂ ಅತ್ತೆ ಭವಾನಿ ಯವರ ಚಿಕಿತ್ಸೆಗೆ ಸಂಬಂಧಿಸಿ ಕಾಣಿಯೂರು ಅಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಪತಿಯ ತಾಯಿ ಮತ್ತು ಅತ್ತೆಗೆ ಚಿಕಿತ್ಸೆ ಕೂಡಿಸಿದ್ದಾರೆ. ಆದರೆ ಆನಂತರ ವಾಪಸ್ಸು ಮನೆಗೆ ಬಂದಿಲ್ಲ. ಸಂಬಂದಿಕರಲ್ಲಿ ವಿಚಾರಿಸಿದಾಗ ಎಲ್ಲಿಯೂ ಪತ್ತೆಯಾಗಿಲ್ಲ. ಅಕೆಯ ಮೊಬೈಲ್‌ ಪೋನ್‌ಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಅಪ್ ಆಗಿರುತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.  

Related posts

ಚಿಕ್ಕಮಗಳೂರಿನ ಮನೆಯೊಂದರಲ್ಲಿ ನಕ್ಸಲರ 3 ಬಂದೂಕು ಪತ್ತೆ..! ಎಫ್.ಐ.ಆರ್ ದಾಖಲು

ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಕಳ್ಳರ ಹಾವಳಿ..! ರಥ ಬೀದಿಯಲ್ಲಿ ನಿಲ್ಲಿಸಿದ್ದ ಯಾತ್ರಾರ್ಥಿಗಳ ಕಾರಿನ ಗಾಜು ಪುಡಿ, ಚಿನ್ನ ಸೇರಿದಂತೆ ಬೆಲೆ ಬಾಳುವ ವಸ್ತುಗಳ ಕಳ್ಳತನ

ಚೆಂಬು : ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ – ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣರಿಂದ ‘ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್’ ಉದ್ಘಾಟನೆ