ಕರಾವಳಿಕ್ರೈಂ

ಸುಬ್ರಹ್ಮಣ್ಯ: ಬೆತ್ತಲೆಯಾಗಿ ಬಂದು ಮನೆಯ ಬಾಗಿಲು ಬಡಿಯುತ್ತಿದ್ದ ವ್ಯಕ್ತಿ..!

ನ್ಯೂಸ್ ನಾಟೌಟ್ : ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ಸುರಕ್ಷಿತವಾಗಿ ಮನೆಗೆ ತಲುಪಿಸಿರುವ ಘಟನೆ ನಡೆದಿದೆ. ಟ್ರಸ್ಟ್ ವತಿಯಿಂದ ಬೆತ್ತಲೆಯಾಗಿ ಓಡಾಡುತ್ತಿದ್ದ ವ್ಯಕ್ತಿಯ ಮನವೊಲಿಸಿ ಚಂದ್ರ ಕಡೋಡಿಯವರು ವಾಪಸ್ ಊರಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವ್ಯಕ್ತಿ ಕೊಪ್ಪಳ ಮೂಲದವನು. ಈತ ಸುಬ್ರಹ್ಮಣ್ಯ, ಗುತ್ತಿಗಾರು ಪೇಟೆಯಲ್ಲಿ ಬೆತ್ತಲೆಯಾಗಿ ಓಡಾಡುತ್ತಿದ್ದ. ಇದರಿಂದಾಗಿ ದಾರಿಯಲ್ಲಿ ನಡೆದುಕೊಂಡು ಹೋಗುವವರಿಗೆ ತೀವ್ರ ಸಂಕಷ್ಟ ಎದುರಾಗಿತ್ತು. ಹೆಣ್ಣು ಮಕ್ಕಳಂತೂ ಈತನ ಕಂಡು ಹೆದರುತ್ತಿದ್ದರು. ಈತ ಒಂದೆರಡು ಮನೆಯ ಬಾಗಿಲನ್ನೂ ಕೂಡ ಬಡಿದಿದ್ದಾನೆ ಅನ್ನುವ ಮಾಹಿತಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ಹಿಂಬಾಲಿಸಿ ಚಂದ್ರಕಡೋಡಿಯವರು ಮನವೊಲಿಸಿ ವಾಪಸ್ ಊರಿಗೆ ಹೋಗಲು ನೆರವಾಗಿದ್ದಾರೆ. ಇವರೊಂದಿಗೆ ಜೀಪ್ ಚಾಲಕರದ, ವಿನಯ್ ಮಾಡಬಾಕಿಲು, ಕುಶಾಲಪ್ಪ ಕುಳ್ಳಾಜೆ, ಜಗದೀಶ್ ಕಾರ್ಜ, ನೀಲಪ್ಪ ಗೌಡ ಪೈಕ, ವೆಂಕಟ್ ಕೂಡ ಇದ್ದು ಸಾಥ್‌ ನೀಡಿದ್ದಾರೆ.

ಸುಬ್ರಹ್ಮಣ್ಯ ಠಾಣಾ ಎಸ್ ಐ ಮಂಜುನಾಥ್ ಬಟ್ಟೆ ನೀಡಿ ಅಸ್ವಸ್ಥ ಯುವಕನನ್ನು ವಾಪಸ್ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿದರು. ಇದೇ ವೇಳೆ ಉದ್ಯಮಿ ದೇವಿ ಪ್ರಸಾದ್ ಕೂಡ ವಾಹನದ ವ್ಯವಸ್ಥೆಗೆ ನೆರವಾದರು. ಒಟ್ಟಿನಲ್ಲಿ ಎಲ್ಲರೂ ಸೇರಿ ಓರ್ವ ದಿಕ್ಕು ತಪ್ಪಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಾಪಸ್ ಊರು ತಲುಪುವಂತೆ ಮಾಡಿದ್ದಾರೆ. ಪೊಲೀಸ್ ಇಲಾಖೆಯು ಕೂಡ ಸಾರ್ವಜನಿಕರ ಸಾಹಸ ಹಾಗೂ ಸಮಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.

Related posts

ಸ್ಪೀಕರ್ ಯು.ಟಿ. ಖಾದರ್ ಅವರಿಗೆ “ದಿ ಗ್ರೇಟ್ ಸನ್ ಆಫ್ ಇಂಡಿಯಾ” ಪ್ರಶಸ್ತಿ ಪ್ರದಾನ

ಹೆತ್ತು-ಹೊತ್ತು ಸಾಕಿದ ತಾಯಿಯನ್ನೇ ಅತ್ಯಾಚಾರಗೈದ ಮಗ..!

ಶಾಲೆಯಲ್ಲಿ ಅಪ್ರಾಪ್ತ ಬಾಲಕನಿಂದ ಗುಂಡಿನ ದಾಳಿ! 8 ಮಕ್ಕಳ ದುರಂತ ಅಂತ್ಯ..!