ಕ್ರೈಂ

ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ಪ್ರವಾಸಿಗರ ಚಿನ್ನ ಕದ್ದು ಬೆಂಗಳೂರಲ್ಲಿ ಮಾರುತ್ತಿದ್ದ ಖತರ್ನಾಕ್ ಲೇಡಿ..!

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಬ್ಯಾಗ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ಬೆಂಗಳೂರಿನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಆಕೆಯ ಹೆಸರು ಮಮತಾ (38). ಈಕೆಯ ಬಾಯ್ ಫ್ರೆಂಡ್ ಕಂ ಸಹಚರ ಎಸ್ಕೇಪ್ ಆಗಿದ್ದಾನೆ. ಬಂಧಿತ ಮಮತಾಳಿಂದ 20.2 ಲಕ್ಷ ಮೌಲ್ಯದ 439 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. 

ಮಹಾ ಕಳ್ಳಿ ಮಮತಾ

ಕಿಲಾಡಿ ಮಮತಾ ಮೂಲತಃ ಆಂಧ್ರ ಪ್ರದೇಶದಳು. 2 ವರ್ಷದ ಹಿಂದೆ ಈಕೆಯ ಗಂಡ ಸಾವನ್ನಪ್ಪಿದ್ದ ಬಳಿಕ ಮತ್ತೊಬ್ಬ ವ್ಯಕ್ತಿಯ ಜೊತೆ ಸಲುಗೆ ಬೆಳೆಸಿಕೊಂಡು ಮದುವೆಯಾಗಲು ನಿರ್ಧಾರ ಮಾಡಿದ್ದಳು. ಈಕೆ, ತನ್ನ ಸಹಚರನೊಂದಿಗೆ ಪ್ರವಾಸಿಗರ ಸೋಗಿನಲ್ಲಿ ಕುಕ್ಕೆ ಮತ್ತು ಧರ್ಮಸ್ಥಳಕ್ಕೆ ಸಾಮಾನ್ಯರಂತೆ ಹೋಗುತ್ತಿದ್ದಳು. ಅಲ್ಲಿ ಶ್ರೀಮಂತರನ್ನ ಗುರುತು ಮಾಡಿ ಹಿಂಬಾಲಿಸುತ್ತಿದ್ದಳು. ಅಲ್ಲಿ ದೇವರ ದರ್ಶನದ ವೇಳೆ ಜನರ ಬ್ಯಾಗ್ ಗಳಿಗೆ ಹೊಂಚು ಹಾಕುತ್ತಿದ್ದ ಮಮತಾ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಳು.ಅಲ್ಲಿಂದ ಬೆಂಗಳೂರಿಗೆ ಬಂದು ಚಿನ್ನ ಅಡವಿಟ್ಟು ಸಾಲ ಪಡೆದುಕೊಳ್ಳುತ್ತಿದ್ದಳು. ಸದ್ಯ ತನಿಖೆ ವೇಳೆ ಕುಕ್ಕೆ ಸುಬ್ರಹ್ಮಣ್ಯ ಠಾಣೆಯಲ್ಲಿ 1 ಕೇಸ್ ಪತ್ತೆಯಾಗಿದೆ. ಯಶವಂತಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.   

Related posts

ಸುಳ್ಯ: ರಾಮಮಂದಿರ ಉದ್ಘಾಟನೆಯ ಬ್ಯಾನರ್ ಹರಿದ ಪ್ರಕರಣ: ಬಿಜೆಪಿ ನೇತೃತ್ವದಲ್ಲಿ ಆಟೋ ಚಾಲಕರ ಪ್ರತಿಭಟನೆ..! ವಿಡಿಯೋ ವೀಕ್ಷಿಸಿ

ರಿಕ್ಷಾದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ: ಓರ್ವನ ಬಂಧನ

ಪ್ರಕಾಶ್ ರಾಜ್ ಓಡಾಡಿದ ಜಾಗಕ್ಕೆ ವಿದ್ಯಾರ್ಥಿಗಳು ಗೋಮೂತ್ರ ಹಾಕಿ ಶುದ್ಧೀಕರಿಸಿದ್ದೇಕೆ ? ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು?