ಕರಾವಳಿಕ್ರೈಂ

ಕುಕ್ಕೆ ಸುಬ್ರಹ್ಮಣ್ಯ: ಆಂಜನೇಯನ ದೇವಸ್ಥಾನಕ್ಕೆ ಕನ್ನ..!, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನ್ಯೂಸ್ ನಾಟೌಟ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟಿರುವ ಅಭಯ ಆಂಜನೇಯ ಗುಡಿಯಿಂದ ಕಳವಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭಯ ಆಂಜನೇಯ ಗುಡಿಯ ಅರ್ಚಕರು ನ.3ರಂದು ರಾತ್ರಿ ದೇವಸ್ಥಾನದ ಪೂಜಾಕಾರ್ಯ ಮುಗಿಸಿ ಬಾಗಿಲು ಹಾಕಿ ತೆರಳಿದ್ದರು. ನ.4ರಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದು ನೋಡಿದಾಗ ದೇವಸ್ಥಾನದ ಪೂಜಾ ಸಾಮಗ್ರಿಗಳು, ಸಿಸಿಟಿವಿ ಕ್ಯಾಮೆರಾದ ಸ್ವತ್ತುಗಳು ಕಳವಾಗಿರುವುದು ಗೊತ್ತಾಗಿದೆ. ಕಳವು ಆದ ಸ್ವತ್ತುಗಳ ಮೌಲ್ಯ ಸುಮಾರು ₹ 10 ಸಾವಿರ ಎಂದು ಅಂದಾಜಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೇತ್ರಾವತಿ ನದಿಗೆ ಹಾರಿದ್ದ ಯುವತಿ ಅಂದು ಬದುಕುಳಿದಳು..!, ಬೆಂಗಳೂರಿನ ಅಪಾರ್ಟ್‍ಮೆಂಟ್‍ವೊಂದರಿಂದ ಜಿಗಿದು ಇಂದು ದುರಂತ ಅಂತ್ಯವನ್ನೇ ಕಂಡಳು

ಮಾನಸಿಕ ಕಾಯಿಲೆ ಏಕೆ ಬರುತ್ತದೆ..? ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋ ವೈದ್ಯೆ ಡಾ| ಪೂನಂ ಹೇಳಿದ್ದೇನು..?

ಪುಟ್ಟ ಮಗುವಿಗೆ ಕೈದಿ ಸಂಖ್ಯೆ 6106 ಎಂದು ಬಟ್ಟೆ ತೊಡಿಸಿ ಫೋಟೋಶೂಟ್..! ದರ್ಶನ್ ಅಭಿಮಾನಿಗಳ ಹುಚ್ಚಾಟಕ್ಕೆ ಜನಾಕ್ರೋಶ..!