ಕರಾವಳಿಸುಳ್ಯ

ಸುಬ್ರಹ್ಮಣ್ಯ: ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ವೇಳೆ ಡಿಕ್ಕಿ ಹೊಡೆದ ಬೈಕ್..!ಕರ್ತವ್ಯ ನಿರತ ಅರಣ್ಯ ಪಾಲಕನಿಗೆ ಗಾಯ,ಆಸ್ಪತ್ರೆಗೆ ದಾಖಲು

ನ್ಯೂಸ್‌ ನಾಟೌಟ್ :ಕರ್ತವ್ಯದ ವೇಳೆಯಲ್ಲಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ವೇಳೆ ಬೈಕ್ ಸವಾರರೊಬ್ಬರು ಬೈಕ್‌ನ್ನು ಡಿಕ್ಕಿ ಹೊಡೆಸಿರುವ ಪರಿಣಾಮ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿರುವ ಘಟನೆ ಬಗ್ಗೆ ಹರಿಹರ-ಕೊಲ್ಲಮೊಗ್ರು ಎಂಬಲ್ಲಿಂದ ವರದಿಯಾಗಿದೆ.ಬಿಜಾಪುರ ಜಿಲ್ಲೆಯ ನಿವಾಸಿ ಶಿವಾನಂದ ಎಸ್‌ ಕುದರಿ(36) ಗಾಯಗೊಂಡಿರುವ ವ್ಯಕ್ತಿಯೆಂದು ತಿಳಿದು ಬಂದಿದೆ.

ಇವರು ಸುಬ್ರಹ್ಮಣ್ಯ ವಲಯದಲ್ಲಿ ಗಸ್ತು ಅರಣ್ಯ ಪಾಲಕನಾಗಿ ಕೆಲಸ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.ಶಿವಾನಂದ ಅವರು ಜ. 25ರಂದು ಮಧ್ಯಾಹ್ನ ಕರ್ತವ್ಯದ ವೇಳೆಯಲ್ಲಿ ಸುಳ್ಯ ತಾಲೂಕು ಹರಿಹರ-ಕೊಲ್ಲಮೊಗ್ರು ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್‌ನಲ್ಲಿ ಬಂದಿರುವ ದೇವಪ್ಪ ಗೌಡ ಎಂಬವರು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿವಾನಂದ ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.ಈ ವೇಳೆ ಶಿವಾನಂದ ಅವರು ರಸ್ತೆ ಬಿದ್ದಿದ್ದು, ಗಾಯಗೊಂಡ ಅವರನ್ನು ಕೂಡಲೇ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪೆರಾಜೆ: ಸುಳ್ಯಕ್ಕೆ ಬಸ್ ನಲ್ಲಿ ಪ್ರಯಾಣಿಸುವಾಗ ಚಿನ್ನದ ಸರ ಬಿದ್ದು ಹೋಗಿದೆ, ಸಿಕ್ಕಿದವರು ತಕ್ಷಣ ಸಂಪರ್ಕಿಸಿ

ಕಾಣಿಯೂರು: ಪುಣ್ಚತ್ತಾರು ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಹಸಿರುವಾಣಿ ಸಮರ್ಪಣೆ

ಚುನಾವಣಾ ಬಿಸಿ: ಪುತ್ತೂರು ತಾಲೂಕಿಗೆ ಬಂದಿಳಿದ ಸಿಆರ್‌ಪಿಎಫ್‌ ಪಡೆ