ಕರಾವಳಿಸುಳ್ಯ

ಸುಬ್ರಹ್ಮಣ್ಯ: ಕುಮಾರಧಾರ ನದಿಗೆ ಹರಿದು ಬರುತ್ತಿದೆ ಕೊಳಚೆ ನೀರು..! ನೀರು ಕುಡಿಯುವವರ ಆರೋಗ್ಯದಲ್ಲಿ ಏರುಪೇರು..? ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕೊಳಚೆ ನೀರನ್ನು ನದಿಗೆ ಬಿಟ್ಟು ನದಿ ನೀರನ್ನು ಹಾಳು ಮಾಡುವಂತಹ ವಿಕೃತ ಮನಸ್ಸುಗಳ ಸಂಖ್ಯೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರು ಬೇಸಿಗೆಯಲ್ಲಿ ಕುಡಿಯುವುದಕ್ಕೆ ಒಂದು ಹನಿ ನೀರು ಸಿಗುವುದೇ ಕಷ್ಟ, ಅಂತಹುದರಲ್ಲಿ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಜನರ ಜೀವನಾಡಿಯಾಗಿರುವ ಕುಮಾರಧಾರ ನದಿಗೆ ಕಿಡಿಗೇಡಿಗಳು ಕೊಳಚೆ ನೀರನ್ನು ಬಿಟ್ಟು ನದಿಯನ್ನು ಅಶುದ್ಧ ಮಾಡುತ್ತಿದ್ದಾರೆ.

ಕೆಲವು ಲಾಡ್ಜ್ ಗಳು ನಿಯಮ ಮೀರಿ ಪೈಪ್ ಗಳ ಮೂಲಕ ನಿರುಪಯುಕ್ತ ಕಲುಷಿತ ನೀರನ್ನು ನದಿಗೆ ಬಿಡುತ್ತಿವೆ. ಹೋಟೆಲ್ ಸೇರಿದಂತೆ ಇನ್ನೂ ಕೆಲವು ಕಡೆಗಳಿಂದ ಕಲುಷಿತ ನೀರು ನದಿಗೆ ಸೇರುತ್ತಿದೆ ಅನ್ನುವ ದೂರು ಕೇಳಿ ಬರುತ್ತಿದೆ. ಸುಬ್ರಹ್ಮಣ್ಯದ ಏನೇಕಲ್ ಸೇರಿದಂತೆ ಹಲವು ಭಾಗದ ಜನರು ಇದೇ ನೀರನ್ನು ಕುಡಿಯಲು ಬಳಸುತ್ತಿರುವುದರಿಂದ ಅವರ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯಾಡಳಿತ ಮಾತ್ರ ಯಾವುದೇ ಕ್ರಮವನ್ನು ಜರುಗಿಸದೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

Related posts

ಇನೋವಾ ಕಾರು ಪಲ್ಟಿ:ತಾಯಿ-ಮಗು ಮೃತ್ಯು-ನಾಲ್ವರಿಗೆ ಗಾಯ

ಬಳ್ಳಾರಿಯಿಂದ ಹೊರಟ ಶಬರಿಮಲೆ ಯಾತ್ರಿಕರ ಬಸ್ ಅಪಘಾತ:ಹಲವರಿಗೆ ಗಾಯ

ನಿಮ್ಮ ಮಗಳ ಹೆಸರಲ್ಲಿ ರೂ.500 ಹೂಡಿಕೆ ಮಾಡಿ, ಭವಿಷ್ಯದ ಭದ್ರತೆ ನೀಡಿ