ಕರಾವಳಿ

ಸುಬ್ರಹ್ಮಣ್ಯ:ದುರ್ವಾಸನೆಯಿಂದ ಸಂಕಟಪಡುತ್ತಿರುವ ಸ್ಥಳೀಯರು,ಸಾವಿರಾರು ಮೀನುಗಳ ಮಾರಣ ಹೋಮ,

384

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯದ ಆದಿಸುಬ್ರಮಣ್ಯದಿಂದ ದರ್ಪಣ ತೀರ್ಥ ಸಮೀಪದ ಬಾಬುರಾಯನಗುಂಡಿ ಎಂಬಲ್ಲಿ ನೀರು ಮಲೀನಗೊಡಿದ್ದು ಸಾವಿರಾರು ಮೀನುಗಳು ಸತ್ತು ತೇಲುತ್ತಿರುವ ದೃಶ್ಯ ಮನಕಲಕುವಂತಿದೆ. ಈ ನೀರು ಕುಕ್ಕೆ ಸುಬ್ರಮಣ್ಯದ ಕುಮಾರಧಾರ ನದಿಗೆ ಸೇರುತ್ತಿದ್ದು,ಅಪಾಯದ ಮುನ್ಸೂಚನೆಯನ್ನು ಸೂಚಿಸುತ್ತಿದೆ.

ಕೇವಲ ಜಲಚರಗಳು ಮಾತ್ರವಲ್ಲ, ಸ್ಥಳೀಯ ಜನರಿಗೂ ಭಾರಿ ತೊಂದರೆಗಳಾಗುತ್ತಿವೆ. ಎಲ್ಲೆಂದರಲ್ಲಿ ಬಿಸಾಡಿರುವ ಕಸಗಳಿಂದಾಗಿ ದುರ್ವಾಸನೆಯಿಂದಾಗಿ ಸಂಕಟ ಪಡುತ್ತಿದ್ದಾರೆ. ಹೊಟೇಲ್,ಲಾಡ್ಜ್ ಗಳಿಂದ ಬರುತ್ತಿರುವ ಕಲುಷಿತ ನೀರಿನಿಂದಾಗಿ ನದಿ ನೀರು ಸಂಪೂರ್ಣ ಹಾಳಾಗಿದೆ.ಡ್ರೈನೇಜ್ ಚೇಂಬರುಗಳಲ್ಲಿ ಲೀಕೇಜ್ ಕಂಡುಬರುತ್ತಿದೆ.ಇನ್ನು ಡ್ರೈನೇಜ್ ನೀರಿನ ಪೈಪ್ ಒಡೆದು ಹೋಗಿದ್ದು,ಅವುಗಳು ನೇರವಾಗಿ ಬಂದು ನದಿ ನೀರನ್ನೇ ಸೇರುತ್ತಿವೆ. ಇವೆಲ್ಲದರಿಂದಾಗಿ ನೀರು ಮಲೀನಗೊಂಡು ನೀರಿನಲ್ಲಿ ಇರುವಂತಹ ಜಲಚರಗಳ ಮಾರಣಹೋಮ ಆಗಿದೆ ಎಂದು ಆ ಭಾಗದ ಜನ ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ದಿನವೊಂದಕ್ಕೆ ಸಾವಿರಾರು ಜನ ಆಗಮಿಸಿ ಪವಿತ್ರ ನದಿಯಲ್ಲಿ ಮಿಂದು ದೇವಸ್ಥಾನಗಳಿಗೆ ತೆರಳುವ ಭಕ್ತರಿಗೂ ತುಂಬಾ ಅಡಚಣೆಯಾಗುತ್ತಿದ್ದು, ಈ ಪುಣ್ಯ ನದಿಯನ್ನುಕಾಪಾಡಬೇಕೆಂದು ವಿನಂತಿಸಿದ್ದಾರೆ.

See also  ಹಿಟ್ಟಿನ ಗಿರಣಿ ಬೆಲ್ ಗೆ ಸಿಲುಕಿಕೊಂಡ ತಾಯಿ ತಲೆ: ಅಮ್ಮನನ್ನು ಬದುಕಿಸಿದ 9 ವರ್ಷದ ಮಗ 'ರಾಷ್ಟ್ರೀಯ ಶೌರ್ಯ ಪ್ರಶಸ್ತಿ'ಗೆ ಆಯ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget