ಕರಾವಳಿಸುಳ್ಯ

ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರಿಗೆ ಕೆಲಸಕ್ಕೆ ಹೋಗಿದ್ದ ಸ್ಥಳದಲ್ಲಿ ಹಲ್ಲೆ ಆರೋಪ,ಆಸ್ಪತ್ರೆಗೆ ದಾಖಲು

376

ನ್ಯೂಸ್ ನಾಟೌಟ್  : ಸುಬ್ರಹ್ಮಣ್ಯದ ವ್ಯಕ್ತಿಯೊಬ್ಬರಿಗೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಪಂಜ ಭಾಗಕ್ಕೆ ಕೆಲಸಕ್ಕೆ ಹೋದ ಸ್ಥಳದಲ್ಲಿ ವ್ಯಕ್ತಿಯೊಬ್ಬ  ಹಲ್ಲೆ ಮಾಡಿರುವುದಾಗಿ ಆರೋಪಿಸಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ನೇರಳಗದ್ದೆಯ ವ್ಯಕ್ತಿ ಎ.12 ರಂದು ಪಂಜ ಸಮೀಪದ ಕರಿಕ್ಕಳದ ಪಂಬೆತ್ತಾಡಿಗೆ  ಕೆಲಸಕ್ಕೆ  ಹೋಗಿದ್ದರು ಎನ್ನಲಾಗಿದೆ. ಈ ವೇಳೆ  ಅಡಿಕೆ ಚೀಲ ಎತ್ತುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಈ ವೇಳೆ  ಹಲ್ಲೆ ಮಾಡಿರುವುದಾಗಿ  ಆರೋಪಿಸಲಾಗಿದೆ.  ಹಲ್ಲೆಗೊಳಾದ ವ್ಯಕ್ತಿಗೆ ಗಾಯವಾಗಿದ್ದು,  ಕೈ ಗೆ ಬಲವಾದ ಹೊಡೆತ ಬಿದ್ದಿದೆ ಎನ್ನಲಾಗಿದೆ.  ಸುಬ್ರಹ್ಮಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇಂದು ಕಡಬ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.

See also  ಏನಿದು ಸರ್ಕಾರದಿಂದ Emergency Alert System ಪರೀಕ್ಷೆ! ಮೊಬೈಲ್​ಗೆ ಬರುವ ಸ್ಯಾಂಪಲ್ ಮೆಸೇಜ್ ಗೆ ಗಾಬರಿಯಾಗಬೇಡಿ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget