ಬೆಂಗಳೂರುರಾಜಕೀಯವೈರಲ್ ನ್ಯೂಸ್ಶಿಕ್ಷಣ

ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದು ಕೂಗಿದ ವಿದ್ಯಾರ್ಥಿ..! ಮಧು ಬಂಗಾರಪ್ಪಗೆ ಸಭೆಯಲ್ಲಿ ಭಾರೀ ಮುಜುಗರ

141

ನ್ಯೂಸ್ ನಾಟೌಟ್ : ವಿದ್ಯಾರ್ಥಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಭಾರೀ ಮುಜುಗರವಾಗಿದ್ದು, ವಿಧಾನಸೌಧದಲ್ಲಿ ಇಂದು(ನ.20) ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ NEET, JEE, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ (Kannada) ಬರಲ್ಲ ಎಂದು ನೇರವಾಗಿಯೇ ಹೇಳಿದ್ದಾನೆ.

ಈ ವೇಳೆ ವಿದ್ಯಾರ್ಥಿಗಳ ಜೊತೆ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್‌ (video conference) ಮೂಲಕ ಸಂವಾದ ನಡೆಸುತ್ತಿದ್ದರು.
ಈ ಮಾತನ್ನು ಕೇಳಿಸಿಕೊಂಡ ಮಧು ಬಂಗಾರಪ್ಪ, ಯಾರೋ ಅದು ಹೇಳಿದ್ದು, ಏನಂತ ಹೇಳಿದ್ದು? ನಾನೇನು ಉರ್ದು ಮಾತಾಡಿದ್ನಾ? ಕನ್ನಡದಲ್ಲೇ ಮಾತನಾಡಿದ್ದು ಎಂದು ಗರಂ ಆದ ಪ್ರಸಂಗ ನಡೆದಿದೆ. ನಂತರ ಪಕ್ಕದಲ್ಲಿ ಕುಳಿತಿದ್ದ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರಲ್ಲಿ, ಯಾರು ನೋಡಿ ರೆಕಾರ್ಡ್ ಮಾಡಿ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಮಾಧ್ಯಮಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಸಮ್ಮುಖದಲ್ಲೇ ವಿದ್ಯಾರ್ಥಿ ನೇರವಾಗಿ ಹೇಳಿದ್ದರಿಂದ ತಕ್ಷಣವೇ ಗಲಿಬಿಲಿಗೊಂಡ ಮಧು ಬಂಗಾರಪ್ಪ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

Click

https://newsnotout.com/2024/11/court-issue-lawyer-nomore-tamilnadu-hosur-viral-news-f/
https://newsnotout.com/2024/11/ar-rehaman-kannada-news-viral-news-mohini-dey/
https://newsnotout.com/2024/11/lady-dance-in-tawel-and-misbehaviour-infront-of-india-gate/
https://newsnotout.com/2024/11/govt-site-kannada-news-school-police-district-administration/
https://newsnotout.com/2024/11/kannada-news-viral-video-pakisthan-beggers-family-donate-food/
https://newsnotout.com/2024/11/udupi-naxal-leader-vikdrm-gowda-kannada-news-viral-news-f/
https://newsnotout.com/2024/11/students-hostel-hidden-camera-issue-vice-chancelloer-d/
See also  ಶಿಕ್ಷಕರು ಸರಿಯಾರಿ ಶಾಲೆಗೆ ಬರುತ್ತಿಲ್ಲವೆಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ..! 258 ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯಲ್ಲಿ ಅವ್ಯವಸ್ಥೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget