ಕ್ರೈಂವೈರಲ್ ನ್ಯೂಸ್

ವಿದ್ಯಾರ್ಥಿನಿಯರಿಗೆ ಮದ್ಯ ಸೇವಿಸಲು ಒತ್ತಾಯಿಸಿದ ಶಿಕ್ಷಕ ಅರೆಸ್ಟ್..! ವಿದ್ಯಾರ್ಥಿಗಳೊಂದಿಗೆ ರಾತ್ರಿ ಹಾಸ್ಟೆಲ್ ನಲ್ಲೇ ಉಳಿದುಕೊಂಡಿದ್ದ ಶಿಕ್ಷಕ..!

ನ್ಯೂಸ್ ನಾಟೌಟ್: ಖಾಸಗಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲೈಂಗಿಕ ಕಿರುಕುಳದ ಆಘಾತಕಾರಿ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಉದಂಗುಡಿ ಎಂಬಲ್ಲಿ ಬೆಳಕಿಗೆ ಬಂದಿದೆ. ಸಲ್ಮಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪೋನ್‌ ಸಿಂಗ್ ಎಂಬಾತ, ವಿದ್ಯಾರ್ಥಿಗಳನ್ನು ಮದ್ಯಪಾನ ಮಾಡಲು ಒತ್ತಾಯಿಸಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು. ಆತನನ್ನು ನಿನ್ನೆ(ನ.11) ಬಂಧಿಸಲಾಗಿದೆ.

ಅಕ್ಟೋಬರ್ 22 ರಂದು ತೂತುಕುಡಿಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಈ ಘಟನೆ ಸಂಭವಿಸಿದ್ದು, ಹಲವು ದಿನಗಳ ಬಳಿಕ ದೂರು ದಾಖಲಾಗಿದೆ. ಈ ಸ್ಪರ್ಧೆಯನ್ನು ಮರುದಿನಕ್ಕೆ ಮುಂದೂಡಿದ ನಂತರ ಪೋನ್ ​ಸಿಂಗ್, ಶಾಲೆಯ 9 ವಿದ್ಯಾರ್ಥಿಗಳು ಮತ್ತು 6 ವಿದ್ಯಾರ್ಥಿನಿಯರೊಂದಿಗೆ ರಾತ್ರಿ ಹಾಸ್ಟೆಲ್‌ ನಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ.

ಪೋನ್‌ ಸಿಂಗ್ ಕೆಲವು ವಿದ್ಯಾರ್ಥಿನಿಯರನ್ನು ಮದ್ಯ ಸೇವಿಸುವಂತೆ ಒತ್ತಾಯಿಸಿದರು ಮತ್ತು ಅಶ್ಲೀಲ, ಅವಹೇಳನಕಾರಿ ಭಾಷೆಯಲ್ಲಿ ಮಾತನಾಡಿದರು ಎಂದು ಆರೋಪಿಸಲಾಗಿದೆ. ಕುಡಿಯದಿದ್ದರೆ ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ತಡೆಯುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಯ ಕುರಿತು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದರೂ, ಶಾಲೆಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ಶಾಲೆಯ ಮುಂದೆ ಜಮಾಯಿಸಿದ ಪೋಷಕರು ಹಾಗೂ ಸಂಬಂಧಿಕರು ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಲಾಗಿದ್ದು, ಶಾಲಾ ಆಡಳಿತ ಮಂಡಳಿ ಫೋನ್​ಸಿಂಗ್ ಅವರನ್ನು ವಜಾಗೊಳಿಸಿದೆ.
ದೂರಿನ ಮೇರೆಗೆ ತಿರುಚೆಂದೂರು ಎಲ್ಲಾ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಯಮತ್ತೂರಿನಲ್ಲಿ ತಲೆಮರೆಸಿಕೊಂಡಿದ್ದ ಪೋನ್‌ ಸಿಂಗ್‌ ನನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ.

Click

Related posts

ಸುಬ್ರಹ್ಮಣ್ಯ: ಸ್ಕೂಟಿಗೆ ಹಿಂದಿನಿಂದ ಕಾರು ಡಿಕ್ಕಿ, ಸವಾರ ಸಾವು

1 ಲಕ್ಷ ಕೊಟ್ರೆ ಒಂದು ವರ್ಷದಲ್ಲಿ 2 ಲಕ್ಷ ಕೊಡುತ್ತೇವೆ ಎಂದು ನಂಬಿಸಿ 30 ಕೋಟಿ ರೂ. ವಂಚಿಸಿದ ದಂಪತಿ..! ಏನಿದು ಪ್ರಕರಣ..?

ಪ್ರಧಾನಿ ಮೋದಿ ನಮೀಬಿಯಾದಿಂದ ತರಿಸಿದ್ದ ಚೀತಾಗಳು ನಿಗೂಢವಾಗಿ ಸಾಯುತ್ತಿರುವುದೇಕೆ? 9 ಚೀತಾಗಳು ಮೃತಪಟ್ಟಿರುದರ ಹಿಂದಿನ ರಹಸ್ಯವೇನು?