Uncategorized

ದಲಿತ ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದ ಪ್ರಕರಣ, ವಾರ್ಡನ್ ವಿರುದ್ಧ ಕ್ರಮವಿಲ್ಲ ಏಕೆ..? ಎನ್‌ ಸಿಆರ್ ಕೇಸ್ ದಾಖಲಿಸಿ ಕೈತೊಳೆದುಕೊಂಡರೇ ಪೊಲೀಸರು..? ಗ್ರಾಮಸ್ಥರ ಆಕ್ರೋಶ

ನ್ಯೂಸ್ ನಾಟೌಟ್: ತಂದೆ-ತಾಯಿ ಇಲ್ಲದ ಅನಾಥ ದಲಿತ ವಿದ್ಯಾರ್ಥಿಯ ಮರ್ಮಾಂಗವನ್ನು ಹಾಸ್ಟೇಲ್ ನಲ್ಲಿ ಕೆಲವು ಪುಂಡ ವಿದ್ಯಾರ್ಥಿಗಳು ಹಿಡಿದೆಳೆದು ಮಾರಣಾಂತಿಕವಾಗಿ ಗಾಯಗೊಳಿಸಿದ ಪ್ರಕರಣ ಸರಿಯಾಗಿ ವಿಚಾರಣೆ ನಡೆಯದೆ ಬಿದ್ದು ಹೋಗುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಹಾಸ್ಟೇಲ್ ನಲ್ಲಿರುವ ಕೆಲವು ಪುಂಡ ವಿದ್ಯಾರ್ಥಿಗಳು ೧೨ ವರ್ಷದ ಬಾಲಕನನ್ನು ಕಸ ಗುಡಿಸುವಂತೆ ಹೇಳಿದ್ದರು. ಈ ವೇಳೆ ನನಗೆ ಈಗ ಬರೆಯಲು ಇದೆ ಎಂದು ಬಾಲಕ ಉತ್ತರಿಸಿದ್ದ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳ ತಂಡವೊಂದು ಬಾಲಕ ಮರ್ಮಾಂಗವನ್ನು ಹಿಡಿದು ಎಳೆದುಕೊಂಡು ಬಂದಿದ್ದಾರೆ. ಇದರಿಂದ ಬಾಲಕನ ಮರ್ಮಾಂಗಕ್ಕೆ ಗಂಭೀರ ಗಾಯವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದೀಗ ಸಂತ್ರಸ್ಥ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.

ಪ್ರಕರಣ ಇಷ್ಟೆಲ್ಲ ದೊಡ್ಡದಾಗಿದ್ದರೂ ಹಾಸ್ಟೇಲ್ ನ ಮೇಲ್ವಿಚಾರಣೆ ನಡೆಸುತ್ತಿರುವ ವಾರ್ಡನ್ ವಿರುದ್ಧ ಯಾವುದೇ ಕ್ರಮವನ್ನು ಪೊಲೀಸರು ತೆಗೆದುಕೊಂಡಿಲ್ಲ. ಎನ್ ಸಿಆರ್ ಕೇಸ್ ಅನ್ನು ಮಾತ್ರ ಪೊಲೀಸರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನ ನಡೆದಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಗಲಾಟೆ ವಿಚಾರ ವಾರ್ಡನ್ ಅವರ ಗಮನಕ್ಕೆ ಬಂದಿರಲಿಲ್ಲವೇ..? ಅಥವಾ ಕತ್ಯವ್ಯ ಲೋಪವಾಗಿದೆಯೇ ಎಂಬುವುದುನ್ನು ತನಿಖೆ ನಡೆಸಬೇಕು. ಯಾರು ಇಲ್ಲದ ಆ ಸಂತ್ರಸ್ತ ಬಾಲಕನ ಭವಿಷ್ಯದ ಪ್ರಶ್ನೆಯಾಗಿದೆ. ಮಗುವಿನ ಜೀವಕ್ಕೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಹೊರುತ್ತಿದ್ದರು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

Click

https://newsnotout.com/2024/09/chartered-accounten-nomore-kannada-news-mother-of-that-employee-wrote-a-latter-to-officer/
https://newsnotout.com/2024/09/muniratna-supporters-threate-to-evidence-kannada-news-case-bengaluru/
https://newsnotout.com/2024/09/kollegala-car-kannada-news-friday-near-bus-stand-police-issue/
https://newsnotout.com/2024/09/digital-upi-payment-innovation-by-auto-driver-kannada-news/
https://newsnotout.com/2024/09/bengaluru-express-train-fire-kannada-news-viral-news-fire/
https://newsnotout.com/2024/09/mangaluru-panamburu-beach-kannada-news-nomore-issue/

Related posts

‘ಅಪ್ಪಾ ಕ್ಷಮಿಸಿಬಿಡು, ಐ ಲವ್ ಯೂ’ ಎಂದು ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ, ಕಾರಣವೇನು?

ಭೀಕರ ಬೈಕ್ ಅಪಘಾತ, ಯುವಕನ ದಾರುಣ ಸಾವು

ಪೊಲೀಸ್ ಠಾಣೆಯೆದುರು ಸಿ.ಟಿ.ರವಿ ಏಕಾಂಗಿ ಧರಣಿ;ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ..!ಏನಿದು ಘಟನೆ?