Latestಯಕ್ಷಗಾನಸುಳ್ಯ

ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಂದ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಯಕ್ಷನಾಟ್ಯ ವೈಭವ ..! ಕರಾವಳಿ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿ!!

918

ನ್ಯೂಸ್‌ ನಾಟೌಟ್‌: ಸುಳ್ಯದ ವಿದ್ಯಾರ್ಥಿಗಳಿಂದ ದೂರದ ಮಧ್ಯಪ್ರದೇಶದಲ್ಲಿ (ಉಜ್ಜಯಿನಿ) ಎ. 2ರಂದು ಯಕ್ಷನಾಟ್ಯ ವೈಭವ ಪ್ರದರ್ಶನಗೊಂಡಿತು. ಅಖಿಲ ಭಾರತೀಯ ನಾಥ ಸಂಪ್ರದಾಯ ಭರ್ತ್ರುಹರಿ ಗುಫಾದ ಮಠಾಧೀಶರಾದ ಪರಮಪೂಜ್ಯ ಯೋಗಿ ಪೀರ್ ರಾಮನಾಥ ಜೀ ಮಹಾರಾಜ್ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳು ಯಕ್ಷನಾಟ್ಯ ವೈಭವವನ್ನು ಸಾದರಪಡಿಸಿದರು.

ವಿದ್ಯಾರ್ಥಿಗಳಾದ ಅದ್ವೈತ್, ಅಧ್ವಿತಿ, ಖುಷಿ ಮತ್ತು ಶ್ರೇಯಸ್ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಚೆಂಡೆಯಲ್ಲಿ ಬೆಳ್ಳಾರೆ ಗುರು ಆಟ್ಸ್‌ ನ ವಾಸುದೇವ ರೈ ಮತ್ತು ಚಕ್ರತಾಳದಲ್ಲಿ ಸುಳ್ಯ ಶಶಿ ಬ್ರದರ್ಸ್ ಇದರ ಭಾಸ್ಕರ ಆಚಾರ್ಯ ಸಹಕರಿಸಿದರು. ಲತೀಶ್ ಗುಂಡ್ಯ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಮತ್ತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಇನ್ನಿತರ ಗಣ್ಯರು ಭಾಗಿಯಾಗಿದ್ದು, ಕರಾವಳಿ ಕಲೆಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರಮಪೂಜ್ಯ ಯೋಗಿ ಪೀರ್ ರಾಮನಾಥ ಜೀ ಮಹಾರಾಜ್ ಅವರು ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

 

See also  ಸುಳ್ಯ: ದೀಪಾವಳಿಗೆ ಪಟಾಕಿ ತುಂಬಿ ಹೊರಟಿದ್ದ ಲಾರಿಯನ್ನು ತಡೆದ ಪೊಲೀಸರು, ಅಕ್ರಮವಾಗಿ ಸಾಗಿಸಲಾಗುತ್ತಿತ್ತೇ ಲಕ್ಷಾಂತರ ರೂ. ಪಟಾಕಿ..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget