ಕ್ರೈಂದೇಶ-ವಿದೇಶವೈರಲ್ ನ್ಯೂಸ್

ವಿದ್ಯಾರ್ಥಿನಿಯರ ಶರ್ಟ್​ ಬಿಚ್ಚಿಸಿ ಕೇವಲ ಬ್ಲೇಜರ್​ನಲ್ಲಿ ಮನೆಗೆ ಕಳುಹಿಸಿದ ಪ್ರಾಂಶುಪಾಲರು..! ಪ್ರತಿಭಟಿಸಿದ ಪೋಷಕರು..!

243

ನ್ಯೂಸ್ ನಾಟೌಟ್ : ಜಾರ್ಖಂಡ್​ ಶಾಲೆಯ ಪ್ರಾಂಶುಪಾಲರ ಕ್ರಮದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ಶರ್ಟ್​ ಬಿಚ್ಚಿಸಿ ಕೇವಲ ಬ್ಲೇಜರ್​ ಧರಿಸಿ ಮನೆಗೆ ಹೋಗುವಂತೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜಾರ್ಖಂಡ್‌ ನ ಧನ್‌ ಬಾದ್‌ ನಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯ ಪ್ರಾಂಶುಪಾಲರು ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೇಸರಗೊಂಡು ಈ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.

10ನೇ ತರಗತಿ ವಿದ್ಯಾರ್ಥಿನಿಯರಿಗೆ ಯೂನಿಫಾರ್ಮ್​ನ ಶರ್ಟ್​ ತೆಗೆಯುವಂತೆ ಹೇಳಿ ಕೇವಲ ಬ್ಲೇಜರ್​ ಧರಿಸಿ ಮನೆಗೆ ಹೋಗುವಂತಹ ದಂಡನೆ ನೀಡಿದ್ದಾರೆ. ವಿದ್ಯಾರ್ಥಿಗಳು ಪೆನ್​ ಡೇ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೈ ಮೇಲೆಲ್ಲ ಬಟ್ಟೆಯಲ್ಲಿ ಬರೆದುಕೊಂಡಿದ್ದರು. ಕೆಲವು ಇಂತಹ ಚಟುವಟಿಕೆಗಳ ಬಗ್ಗೆ ಪ್ರಾಂಶುಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು, ಆಚರಣೆ ಬಳಿಕ ವಿದ್ಯಾರ್ಥಿನಿಯರನ್ನು ಕರೆದು ಅವರಿಗೆ ಶರ್ಟ್​ ಬಿಚ್ಚಿ ಕೇವಲ ಬ್ಲೇಜರ್ ಧರಿಸುವಂತೆ ಹೇಳಲಾಯಿತು. ಅದೇ ಸ್ಥಿತಿಯಲ್ಲಿ ಮನೆಗೆ ಕಳುಹಿಸಲಾಗಿದೆ.

ಘಟನೆ ಬಗ್ಗೆ ಕಣ್ಣೀರು ಹಾಕುತ್ತಾ ಮನೆಯವರಿಗೆ ಮಕ್ಕಳು ವಿವರಿಸಿದ್ದಾರೆ. ಘಟನೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳೀಯ ಶಾಸಕಿ ರಾಗಿಣಿ ಸಿಂಗ್ ಕೂಡ ಪೋಷಕರ ಜೊತೆಗಿದ್ದು, ಘಟನೆ ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

Click

https://newsnotout.com/2025/01/mangaluru-kambala-inaguaration-ullala-mangaluru-v-news/
https://newsnotout.com/2025/01/rishab-shetty-kannada-news-anjaneya-swami-film-issue-kannada-news-cinema/
https://newsnotout.com/2025/01/kambala-ct-ravi-kannada-news-15-days-deadline-viral-latter/
https://newsnotout.com/2025/01/baby-found-in-dust-bin-kannada-news-public-and-police-rescue/
See also  ವಿಷದ ಹಾವು ಕಚ್ಚಿ ಗೋಳಿತೊಟ್ಟು ಗ್ರಾಂ.ಪಂ.ಸದಸ್ಯೆ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget