ಕ್ರೈಂ

ತಾಯಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿನಿ

813

ಹಾಸನ: ತಾಯಿಗೆ ಮೆಸೇಜ್ ಮಾಡಿ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.

15 ವರ್ಷದ ಬಾಲಕಿ ಪೂರ್ವಿಕಾ ಆತ್ಮಹತ್ಯೆ ಮಾಡಿಕೊಂಡವಳು. ಹಾಸನದ ಖಾಸಗಿ ಶಾಲೆಯಲ್ಲಿ ಬಾಲಕಿ ಒಂಬತ್ತನೇ ತರಗತಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಳು. ಈಕೆಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕುರಿತು ಕೇಸ್ ದಾಖಲಿಸಲಾಗಿದೆ. ಅಮ್ಮಾ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸು ಎಂದು ತಾಯಿಗೆ ಮೊಬೈಲ್‌ನಲ್ಲಿ ಪೂರ್ವಿಕಾ ಸಂದೇಶ ಕಳುಹಿಸಿದ್ದಾಳೆ. ತಾಯಿ ಮಗಳನ್ನು ತಲುಪುವ ವೇಳೆಗೆ ಮೃತಪಟ್ಟಿದ್ದಳು.

See also  ಇನ್ಫೋಸಿಸ್ ಸುಧಾ ಮೂರ್ತಿ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್! ಅಮೆರಿಕದ ಸಂಘಟನೆಗಳಿಗೆ ವಂಚಿಸಿದ್ದು ಹೇಗೆ ಅರ್ಚಕ? ಅರ್ಚಕನಿಗೆ ಪೊಲೀಸರಿಂದ ಮಂಗಳಾರತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget