ಕ್ರೈಂ

ಈಜು ಕಲಿಯಲು ಹೋದ ಪಿ.ಯು.ಸಿ. ವಿದ್ಯಾರ್ಥಿ ದಾರುಣ ಸಾವು…!!

521

ಶಿರಸಿ: ಇಲ್ಲಿನ ಕೆಂಗ್ರೆ ಹೊಳೆಯಲ್ಲಿ ಸ್ನೇಹಿತರೊಂದಿಗೆ ಈಜು ಕಲಿಯಲು ಹೋಗಿ ಆಕಸ್ಮಿಕವಾಗಿ ನೀರಿನ ಸುಳಿಗೆ ಸಿಲುಕಿ ಪಿ.ಯು.ಸಿ. ವಿದ್ಯಾರ್ಥಿಯೋರ್ವ ಸಾವಿಗೀಡಾಗಿದಾನೆ. ಲಖನ್ ಗಜಾನನ ಶಿಂಧೆ ಎಂಬ ವಿದ್ಯಾರ್ಥಿಯೇ ಸಾವು ಕಂಡ ದುರ್ದೈವಿಯಾಗಿದ್ದಾನೆ. ಈತ ಗುರುವಾರ ಮಧ್ಯಾಹ್ನ ತಾಲೂಕಿನ ಕೆಂಗ್ರೆ ಹೊಳೆಯಲ್ಲಿ ಸ್ನೇಹಿತರೊಂದಿಗೆ ಈಜು ಕಲಿಯಲು ಹೋಗಿ ಆಕಸ್ಮಿಕವಾಗಿ ನೀರಿನ ಸುಳಿಗೆ ಸಿಲುಕಿದ್ದ. ಹೊರಬರಲಾಗದೆ ಆತ ನೀರಿನಲ್ಲಿಯೇ ಸಾವು ಕಂಡಿದ್ದ. ಆತನ ಶವವನ್ನು ಹೊರ ತೆಗೆಯಲು ಸಾಧ್ಯವಾಗದೇ ಇದ್ದಾಗ ಅಲ್ಲಿದ್ದ ಸ್ನೇಹಿತರು ಪೊಲೀಸರಿಗೆ ದೂರವಾಣಿ ಮೂಲಕ ತಿಳಿಸಿದ್ದರು. 

See also  ಮೋಜು -ಮಸ್ತಿ ಮಾಡುತ್ತಿದ್ದ ವೇಳೆ ಭಾವಿ ಪತಿಯ ಎದುರೇ ಬಿದ್ದು ಪ್ರಾಣಬಿಟ್ಟ ಯುವತಿ..! ಮದುವೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ದುರಂತ ಅಂತ್ಯ..!
  Ad Widget   Ad Widget   Ad Widget   Ad Widget   Ad Widget   Ad Widget