ಕ್ರೈಂಬೆಂಗಳೂರು

ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ..! ಬಿಬಿಎ ವ್ಯಾಸಂಗ ಮಾಡುತ್ತಿದ್ದಾಕೆಗೆ ಏನಾಯ್ತು..?

ನ್ಯೂಸ್ ನಾಟೌಟ್: ಯುವತಿಯೊಬ್ಬಳು ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸ ವರ್ಷವೇ ಬೆಂಗಳೂರಿನ ಸುಧಾಮನಗರದಲ್ಲಿ ನಡೆದಿದೆ.

ವರ್ಷಿಣಿ (21) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿರುವ ಈಕೆ ಜಯನಗರದ ಕಾಲೇಜ್ ಒಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಪೊಲೀಸರು (Police) ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಆಕೆಯ ಮನೆಯಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆಯಾ ಎನ್ನುವುದು ತಿಳಿದುಬಂದಿಲ್ಲ.

https://newsnotout.com/2024/01/rashi-bhavishya-new-year-2024/

Related posts

ಲಾಕ್ ಡೌನ್ ಪ್ರಸ್ತಾವವೇ ಸರ್ಕಾರದ ಮುಂದಿಲ್ಲ; ಡಾ.ಕೆ.ಸುಧಾಕರ್ ಸ್ಪಷ್ಟನೆ

ಖಾಸಗಿ ಕ್ಷಣಕ್ಕಾಗಿ ಪೀಡಿಸಿದ ಮಾವನೆದುರೇ ಬೆಂಕಿ ಹಚ್ಚಿಕೊಂಡ ಯುವತಿ..! ಸಾಫ್ಟ್‌ ವೇ‌ರ್ ಎಂಜಿನಿಯರ್ ಆಗಿದ್ದ ಯುವತಿಯ ದುರಂತ ಅಂತ್ಯ..!

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಐಟಿಐ ವಿದ್ಯಾರ್ಥಿ ಸಾವು