ಕರಾವಳಿ

ವಿದ್ಯಾರ್ಥಿಯ ಎರಡು ಕಾಲನ್ನೇ ಮುರಿದ ಪ್ರಾಂಶುಪಾಲ..!

ನ್ಯೂಸ್ ನಾಟೌಟ್: ಶಾಲೆಗೆ ತಡವಾಗಿ ಹೋದರೆ ವಿದ್ಯಾರ್ಥಿಗಳನ್ನು ವಾಪಾಸ್ ಮನೆಗೆ ಕಳುಹಿಸುವುದು , ಒಂಟಿ ಕಾಲಲ್ಲಿ ನಿಲ್ಲಿಸುವುದು ಅಥವಾ  ಗ್ರೌಂಡ್ ನಲ್ಲಿ ನಾಲ್ಕು ಸುತ್ತು ಓಡಿಸುವುದು  ಶಿಕ್ಷಕರ  ಇಂತಹ ಶಿಕ್ಷೆಗಳು  ಸಾಮಾನ್ಯ ಆದರೆ ಕ್ಲಾಸಿಗೆ ಬರುವಾಗ ಐದು ನಿಮಿಷ ತಡವಾಯಿತೆಂಧು ವಿದ್ಯಾರ್ಥಿಯನ್ನು ಸರಿಯಾಗಿ ಥಳಿಸಿ ಎರಡೂ ಕಾಲುಗಳ ಮೂಳೆಯನ್ನು ಮುರಿದಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.

ಶಾಮ್ಲಿಯ ಆದರ್ಶ್ ಮಂಡಿ ಪ್ರದೇಶದ ಮುಂಡೇತ್ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ತಡವಾಗಿ ಬಂದಿದ್ದಕ್ಕಾಗಿ ಜೈ ಜವಾನ್ ಜೈ ಕಿಸಾನ್ ಇಂಟರ್ ಕಾಲೇಜಿನ ಪ್ರಾಂಶುಪಾಲರು ದೇವಲ್ ಎಂಬ 8 ನೇ ತರಗತಿಯ ವಿದ್ಯಾರ್ಥಿಯನ್ನು ದೊಣ್ಣೆಗಳಿಂದ ಥಳಿಸಿದ್ದಾರೆ. ಇದರಿಂದ ದೇವಲ್ ನ ಎರಡೂ ಕಾಲುಗಳ ಮೂಳೆಗಳು ಮುರಿದಿವೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತನ ತಂದೆ ಪ್ರಾಂಶುಪಾಲರ ವಿರುದ್ಧ ಆದರ್ಶ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

Related posts

ಜಾತ್ರೆ ಅಂಗಡಿಗಳಿಗೆ ಶರತ್ ಪಂಪ್ ವೆಲ್ ಕೇಸರಿ ಧ್ವಜ ನೆಟ್ಟದ್ದೇಕೆ? ಕೇಸರಿ ಧ್ವಜ ಹಾಕಿರುವ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕೆ? ಇಲ್ಲಿದೆ ವಿಡಿಯೋ

ಕೊಡಗು: ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ಕಾರಿನ ನಡುವೆ ಭೀಕರ ಅಪಘಾತ..! ಓರ್ವ ಪ್ರಯಾಣಿಕನ ಎರಡೂ ಕಾಲುಗಳು ಕಟ್..!

ಸಿಗ್ನಲ್ ನಲ್ಲಿ ನಿಂತಿದ್ದ ಸ್ಕೂಟಿಗೆ ಲಾರಿ ಡಿಕ್ಕಿ,ತಂದೆ-ಮಗಳು ದಾರುಣ ಅಂತ್ಯ