ಕ್ರೈಂಬೆಂಗಳೂರು

ತಡವಾಗಿ ಬಂದನೆಂದು ನಿಂದಿಸಿದರಾ ಶಿಕ್ಷಕರು..? ಕಾಲೇಜಿನ ಐದನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ..!

ನ್ಯೂಸ್ ನಾಟೌಟ್: ಇತ್ತೀಚೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಬಂದ ಬಳಿಕ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗಿವೆ. ಆದರೆ, ಕಾಲೇಜಿನ ಐದನೇ ಮಹಡಿಯಿಂದ ವಿದ್ಯಾರ್ಥಿಯೊಬ್ಬ‌ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಲೇಜೊಂದರಲ್ಲಿ ಮೇ.15ರಂದು ನಡೆದಿದೆ.

ಕರಸಾಲ ರಾಹುಲ್ (21) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ ಎಮದು ಗುರುತಿಸಲಾಗಿದೆ. ಈತ ಕಂಪ್ಯೂಟರ್ ಸೈನ್ಸ್ ವಿಭಾಗದ ಐದನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಸೋಮವಾರ(ಮೇ.13) ಕಾಲೇಜಿನಲ್ಲಿ ಪರೀಕ್ಷೆ ನಡೆದಿದ್ದು, ಈ ಸಮಯದಲ್ಲಿ ಕಾಲೇಜಿಗೆ ತಡವಾಗಿ ಬಂದಿದ್ದ. ಇದೇ ವಿಚಾರವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಯನ್ನು ನಿಂದಿಸಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ರಾಹುಲ್ ಮೂಲತಃ ಆಂಧ್ರಪ್ರದೇಶ ಕರ್ನೂಲ್ ಮೂಲದ ದಂಪತಿಗಳ ಕುಟುಂಬದಿಂದ ಬಂದಿದ್ದು, ಕೆಲ ವರ್ಷಗಳಿಂದ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಹಾಸ್ಟೆಲ್‌ನಲ್ಲಿ ಇದ್ದ ಎನ್ನಲಾಗುತ್ತಿದೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

Click 👇

https://newsnotout.com/2024/05/hindu-muslim-marriage-issue-and-police
https://newsnotout.com/2024/05/vacancy-in-bmtc-conductor-job
https://newsnotout.com/2024/05/love-and-man-mistaken-and-police
https://newsnotout.com/2024/05/koragajja-cinema-director-sudhir-attavara

Related posts

ಸ್ನೇಹಿತನ ಪತ್ನಿಗಾಗಿ ಬೈಕ್‌ ಕದ್ದ ಗೆಳೆಯ..! ಕಳ್ಳತನದಲ್ಲೂ ಮಾನವೀಯತೆ ಮೆರೆದ ಅಶೋಕ್‌..!

12ನೇ ತರಗತಿ ಕಲಿತವನಿಂದ ದಿನಕ್ಕೆ 5 ಕೋಟಿಗೂ ಹೆಚ್ಚು ವ್ಯವಹಾರ..! ಈತನ ತಾಂತ್ರಿಕ ಜ್ಞಾನಕ್ಕೆ ಬೆಚ್ಚಿಬಿದ್ದ ಪೊಲೀಸರು!

ಇಸ್ರೇಲ್ ಪ್ರಧಾನಿ ಮನೆ ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿ..! ಬೆಂಜಮಿನ್ ನೆತನ್ಯಾಹು ಕುಟುಂಬ ಬದುಕುಳಿದದ್ದೇಗೆ..?