ಕ್ರೈಂವೈರಲ್ ನ್ಯೂಸ್

ನನ್ನ ಹೆಲ್ಮೆಟ್ ಕಾಣೆಯಾಗಿದೆ ಎಂದು ದೂರು ಕೊಟ್ಟ ವಿದ್ಯಾರ್ಥಿ! ಆ ಹೆಲ್ಮೆಟ್ ಬೆಲೆ ಕೇಳಿದ್ರೆ ಗಾಬರಿಯಾಗ್ತಿರ..!

ನ್ಯೂಸ್ ನಾಟೌಟ್: ದ್ವಾರಕನಗರದ ಜಯದುರ್ಗ ಬೇಕರಿ ಬಳಿ ಹೆಲ್ಮೆಟ್ ಕಳ್ಳತನವಾಗಿದೆ ಎಂದು ಸೂರ್ಯ ಎಂಬ ವ್ಯಕ್ತಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಹೆಲ್ಮೆಟ್ 10 ಸಾವಿರ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗಿದ್ದು, ದೂರಿನನ್ವಯ ಎಫ್‌ಐಆರ್ ದಾಖಲಿಸಿ ಹೆಲ್ಮೆಟ್ ಹುಡುಕಾಟಕ್ಕೆ ಪೊಲೀಸರು (Police) ಮುಂದಾಗಿದ್ದಾರೆ ಎನ್ನಲಾಗಿದೆ. ದೂರುದಾರ ಸೂರ್ಯ ಪಿಇಎಸ್ ಕಾಲೇಜಿನ ಎಲ್​ಎಲ್​ಬಿ ವಿದ್ಯಾರ್ಥಿಯಾಗಿದ್ದಾರೆ.

ನಾನು ಹೊಸಕೆರಳ್ಳಿ ದ್ವಾರಕಾ ನಗರದಲ್ಲಿರುವ ಪಿಇಎಸ್ ಕಾಲೇಜ್​ನಲ್ಲಿ 4ನೇ ವರ್ಷದ ಬಿಬಿಎ ಎಲ್​ಎಲ್​ಬಿ ವ್ಯಾಸಂಗ ಮಾಡುತ್ತಿದ್ದೇನೆ. ಮಧ್ಯಾಹ್ನ ಸುಮಾರು 2.20ಕ್ಕೆ ನಮ್ಮ ಕಾಲೇಜ್ ಪಕ್ಕದ ದ್ವಾರಕಾ ನಗರ ರಸ್ತೆಯಲ್ಲಿನ ಜಯದುರ್ಗ ಬೇಕರಿ ಎದುರಿನ ಪೆಟ್ಟಿ ಅಂಗಡಿಯ ಒಂದು ಟೇಬಲ್ ಮೇಲೆ ಹೆಲ್ಮೆಟ್ ಇಟ್ಟು ಜ್ಯೂಸ್​ ಕುಡಿಯಲು ಹೋಗಿದ್ದೆ, ಈ ವೇಳೆ ಸುಮಾರು ಗಂಟೆ 2.40ಕ್ಕೆ ಸಮಯಕ್ಕೆ ಹೋಗಿ ನೋಡಿದಾಗ ಅಲ್ಲಿ ನನ್ನ ಹೆಲ್ಮೆಟ್ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಕಳ್ಳತನವಾಗಿರುವ ಹೆಲ್ಮೆಟ್ ಆಕ್ಸರ್ ಕಂಪನಿಯದ್ದಾಗಿದ್ದು, ಕಪ್ಪು ಮತ್ತು ಹಸಿರು ಬಣ್ಣದಾಗಿರುತ್ತದೆ. ಸುಮಾರು 10 ಸಾವಿರ ರೂಪಾಯಿ ಬೆಲೆ ಬಾಳುತ್ತದೆ ಎಂದು ಸೂರ್ಯ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೇಕರಿ ಮತ್ತು ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬಿಸಿದ್ದಾರೆ ಎನ್ನಲಾಗಿದೆ.

Related posts

ಮಹಾಕುಂಭಮೇಳದಲ್ಲಿ ಒಂದೇ ದಿನದಲ್ಲಿ 3.5 ಕೋಟಿ ಜನರಿಂದ ಮಕರ ಸಂಕ್ರಾಂತಿಯಂದು ಅಮೃತ ಸ್ನಾನ..! ಸಂಗಮ ಕ್ಷೇತ್ರದಲ್ಲಿ ಮಿಂದೆದ್ದ ನಾಗಾ ಸಾಧುಗಳ 11 ಅಖಾಡಗಳು

ಪೆರಾಜೆ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಸಿದ್ದಗಂಗಾ ಮಠದ ಅನ್ನ ದಾಸೋಹಿ ಶಿವಕುಮಾರ ಸ್ವಾಮೀಜಿಯ ಪುತ್ಥಳಿ ವಿರೂಪಗೊಳಿಸಿದ ಆರೋಪಿ ಅರೆಸ್ಟ್..! ಮೂರ್ತಿ ಒಡೆಯಲು ಕನಸನಲ್ಲಿ ಬಂದು ಏಸು ಹೇಳಿದ್ದ ಎಂದ ಆರೋಪಿ..!