Latestಕ್ರೈಂವೈರಲ್ ನ್ಯೂಸ್

ನಾಯಿಗಳು ಬೊಗಳಿ ಕಿರಿ-ಕಿರಿ ಮಾಡುತ್ತವೆ ಎಂದು ವಿಷ ಹಾಕಿ ಕೊಂದ ವ್ಯಕ್ತಿ..! 25ಕ್ಕೂ ಹೆಚ್ಚು ನಾಯಿಗಳು ಸಾವು..!

608

ನ್ಯೂಸ್ ನಾಟೌಟ್: ನಾಯಿಗಳು ಬೊಗಳುತ್ತವೆ ಕಿರಿ ಕಿರಿ ಎಂದು 25ಕ್ಕೂ ಹೆಚ್ಚು ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ. ಈ ಸತ್ತ ನಾಯಿಗಳಲ್ಲಿ ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳು ಸೇರಿವೆ.

ಈ ಆಘಾತಕಾರಿ ಘಟನೆ ಅಕೋಲಾ ನಗರದ ಪಕ್ಕದಲ್ಲಿರುವ ಗುಡ್ಡಿ ಪ್ರದೇಶದಲ್ಲಿ ನಡೆದಿದೆ. ತಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೀದಿ ನಾಯಿಗಳು ನಮ್ಮನ್ನು ನೋಡಿ ಬೊಗಳುತ್ತವೆ ಎನ್ನುವ ಕಾರಣಕ್ಕಾಗಿ, ಅಪರಿಚಿತ ವ್ಯಕ್ತಿಯೊಬ್ಬ ಈ ಮೂಕ ಪ್ರಾಣಿಗಳಿಗೆ ವಿಷ ನೀಡಿ ಕೊಂದಿದ್ದಾನೆ.

ವಿಷಪೂರಿತ ಆಹಾರವನ್ನು ಸೇವಿಸಿದ 24 ಗಂಟೆಗಳಲ್ಲಿ 25 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ, ಹಾಗೆಯೇ ಕೆಲವು ಇನ್ನೂ ಗಂಭೀರ ಸ್ಥಿತಿಯಲ್ಲಿವೆ.

ಪ್ರದೇಶದ ನಿವಾಸಿಗಳು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಯ ತನಿಖೆಗಾಗಿ ಸ್ಥಳೀಯರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ವಿಷಯವನ್ನು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ150 ವರ್ಷಗಳಷ್ಟು ಹಳೇಯ ಬಾವಿ ಸ್ವಚ್ಛಗೊಳಿಸುವಾಗ ದಿಢೀರ್ ಹೊರ ಬಂದ ವಿಷಾನಿಲ..! 8 ಮಂದಿ ಸಾವು..!

ಡೀಸೆಲ್​​ ದರ ಏರಿಕೆ ವಿರೋಧಿಸಿ ಲಾರಿ ಮುಷ್ಕರಕ್ಕೆ ತಯಾರಿ..! ಅಗತ್ಯ ವಸ್ತುಗಳ ಸಾಗಾಟ ದರ ಹೆಚ್ಚಳ ಸಾಧ್ಯತೆ..!

See also  ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪೊಲೀಸ್ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಅರೆಸ್ಟ್..! ಆತನಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಗಾಗಿ ಹುಡುಕಾಟ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget