ಬೆಂಗಳೂರು

ನಿರ್ಜನ ಪ್ರದೇಶದಲ್ಲಿ ಶಾಲಾ ಬಾಲಕಿ ಅಪಹರಣಕಾರರಿಂದ ಬಚಾವಾಗಿದ್ದೇಗೆ? ಬೀದಿ ನಾಯಿಗಳ ಆ ಒಂದು ಕೆಲಸ ವ್ಯಾಪಕ ಶ್ಲಾಘನೆಗೆ ಗುರಿಯಾಗಿದ್ದೇಕೆ?

156

ನ್ಯೂಸ್ ನಾಟೌಟ್ :  ಬೀದಿ ನಾಯಿಗಳನ್ನು ಕಂಡಾಕ್ಷಣ ಜನ ಹಿಗ್ಗಾ ಮುಗ್ಗ ಬಯ್ಯೋದಿದೆ.  ಅವುಗಳು ಸಮಾಜಕ್ಕೆ ಕಂಟಕ, ಅಪಾಯಕಾರಿ ಎಂದು ನಿರ್ಧರಿಸಿ ಎಲ್ಲರೂ ಅವುಗಳನ್ನು ಶಿಕ್ಷೆಗೆ ಒಳಪಡಿಸುತ್ತಾರೆ.ಆದರೆ ಈ ಒಂದು ಘಟನೆಯಲ್ಲಿ ಬೀದಿ ನಾಯಿಗಳು ಇಲ್ಲದೇ ಇರುತ್ತಿದ್ದರೆ ಬಾಲಕಿ ಅಪಹರಣವಾಗುತ್ತಿದ್ದಳೋ ಏನೋ..!

ಹೌದು, ಸದ್ಯಕ್ಕೆ ಈ ವಿಡಿಯೋ ನೋಡಿ ನೆಟ್ಟಿಗರು ಬೀದಿನಾಯಿಗಳಿಗೆ ಭೇಷ್ ಅನ್ನುತ್ತಿದ್ದಾರೆ.ಏಕೆಂದರೆ​  ಬೀದಿನಾಯಿಯೊಂದು ಅಪಹರಣಕಾರರಿಂದ ಶಾಲಾಬಾಲಕಿಯೊಬ್ಬಳನ್ನು ರಕ್ಷಿಸಿ ನೆಟ್ಟಿಗರಿಂದ ಶಭಾಷ್​ ಎನ್ನಿಸಿಕೊಂಡಿದೆ. ವೈರಲ್ (Viral) ಆಗುತ್ತಿರುವ ವಿಡಿಯೋದಡಿ ನೆಟ್ಟಿಗರು ಪ್ರತಿಕ್ರಿಯೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ನಿರ್ಜನವಾದ ಬೀದಿಯೊಂದರಲ್ಲಿ ಬಾಲಕಿಯೊಬ್ಬಳು ಬ್ಯಾಗ್​ ಹೊತ್ತುಕೊಂಡು ತನ್ನ ಪಾಡಿಗೆ ತಾನು ನಡೆದುಕೊಂಡು ಬರುತ್ತಾಳೆ. ಆಗ ಇದ್ದಕ್ಕಿದ್ದ ಹಾಗೆ ಕಾರ್ ಬರುತ್ತದೆ. ಡ್ರೈವರ್​ ಸೀಟ್​ನಲ್ಲಿ ಕುಳಿತ ವ್ಯಕ್ತಿ ಆಕೆಯನ್ನು ಅಪಹರಿಸುವ ಪ್ರಯತ್ನಕ್ಕೆ ಮುಂದಾಗುವ ಮೊದಲೇ ಬೀದಿನಾಯಿಯೊಂದು ಓಡಿಬಂದು ಅವನನ್ನು ಕಚ್ಚಲು ನೋಡುತ್ತದೆ. ಅಂತೂ ಅಪಹರಣಕಾರನು ಭಯದಿಂದ ಅಲ್ಲಿಂದ ಪರಾರಿಯಾಗುತ್ತಾನೆ. ಶಾಲಾಬಾಲಕಿ ಮಾತ್ರ ಆಕಸ್ಮಿಕವಾದ ಈ ಘಟನೆಯಿಂದಾಗಿ ಆಘಾತಕ್ಕೆ ಒಳಗಾಗುತ್ತಾಳೆ.

ಹತ್ತಿರದ ಕಟ್ಟಡವೊಂದಕ್ಕೆ ಅವಳಡಿಸಿದ ಸಿಸಿಕ್ಯಾಮೆರಾದಲ್ಲಿ ಈ ದೃಶ್ಯಾವಳಿ ದಾಖಲಾಗಿದೆ. ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು 24.6 ಮಿಲಿಯನ್ ಗಿಂತಲೂ ಜಾಸ್ತಿ ​ ಜನ ನೋಡಿದ್ದು, 4.7 ಲಕ್ಷ ಜನರು ಲೈಕ್ ಮಾಡಿದ್ದಾರೆ. 41,000 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ನಾಯಿಯ ಸಮಯಪ್ರಜ್ಞೆ ಮತ್ತು ರಕ್ಷಣಾ ಸ್ವಭಾವವನ್ನು ಹೊಗಳಿದ್ಧಾರೆ. ಜೊತೆಗೆ ಈ ನಾಯಿಯನ್ನು ನಾನು ದತ್ತು ಪಡೆಯುತ್ತೇನೆ ಎಂದು ಮುಂದಾಗಿದ್ದಾರೆ.

ಬೀದಿ ನಾಯಿ ಅಂದ ಕೂಡಲೇ ಅನೇಕರಿಗೆ ಅಲರ್ಜಿ.ಇನ್ನೂ ಕೆಲವರು ನಾಯಿಗಳಿಗಿಂತ ಬೆಕ್ಕುಗಳನ್ನು ಇಷ್ಟ ಪಡುವವರು ಇದ್ದಾರೆ. ದೃಶ್ಯದಲ್ಲಿ ನಾಯಿಗೇನು ಅವನು ಭಯ ಬಿದ್ದಿಲ್ಲ, ಆದರೆ ಅದರ ಬೊಗಳುವಿಕೆಯಿಂದ ಅಲ್ಲಿ ಉಂಟಾಗುವ ಸನ್ನಿವೇಶವನ್ನು ನೆನಪಿಸಿಕೊಂಡು ಅವನು ಕಾಲ್ಕಿತ್ತಿದ್ದಾನೆ ಎಂದಿದ್ದಾರೆ ಇನ್ನೊಬ್ಬರು. ಆಕೆ ಎಷ್ಟೊಂದು ಹೆದರಿದ್ದಳು, ನೀವದನ್ನು ಗಮನಿಸಲಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ನಾಯಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಹಲವಾರು ಜನ.

See also  11 ವರ್ಷದ ಬಳಿಕ ಸೌಜನ್ಯ ರೇಪ್‌-ಮರ್ಡರ್‌ ಕೇಸ್‌ಗೆ ರೋಚಕ ಟ್ವಿಸ್ಟ್, ಸಂತೋಷ್ ರಾವ್ ನಿರಪರಾಧಿಯಾದ್ರೆ ಸೌಜನ್ಯಳನ್ನು ಕೊಂದವರು ಯಾರು? ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget