ಕರಾವಳಿಪುತ್ತೂರುರಾಜಕೀಯ

ಉಜಿರೆಯಲ್ಲಿ ಕಾಂಗ್ರೆಸ್‌ ಮುಖಂಡನ ಕಾರಿಗೆ ಕಲ್ಲೆಸೆತ

ನ್ಯೂಸ್‌ ನಾಟೌಟ್‌: ಕಾಂಗ್ರೆಸ್ ಮುಖಂಡ ಸಂಚರಿಸುತ್ತಿದ್ದ ಕಾರಿನ ಮೇಲೆ ಭಾನುವಾರ ರಾತ್ರಿ (ಎ.30) ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರವೀಣ್ ಫರ್ನಾಂಡೀಸ್  ಸಂಚರಿಸುತ್ತಿದ್ದ ಕಾರಿಗೆ ಅನುಗ್ರಹ ಶಾಲೆಯ ಬಳಿ ಕಲ್ಲು ತೂರಾಟ ನಡೆಸಿದ್ದಾರೆ. ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಆಪ್ತರಾಗಿ ಗುರುತಿಸಿಕೊಂಡಿದ್ದ ಪ್ರವೀಣ್ ಚುನಾವಣಾ ಪ್ರಚಾರಕ್ಕೆ ಜತೆಯಲ್ಲಿ ಹೋಗುತ್ತಿದ್ದರು. ಇದೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇತ್ತೀಚೆಗೆ ಪ್ರವೀಣ್ ಬಗ್ಗೆ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದರು. ಪ್ರವೀಣ್ ಫರ್ನಾಂಡೀಸ್ ಮೇಲೆ ಹಲವು ಬಾರಿ ದಾಳಿಯಾಗಿತ್ತು. ಬಳಿಕ ಸರ್ಕಾರದಿಂದ ಪಿಸ್ತೂಲ್ ಪಡೆದುಕೊಂಡಿದ್ದರು. ಆದರೆ ಚುನಾವಣಾ ಸಂದರ್ಭದಲ್ಲಿ ಪಿಸ್ತೂಲ್ ಸ್ಥಳೀಯ ಠಾಣೆಗೆ ಒಪ್ಪಿಸಿದ್ದಾರೆ. ಇದೇ ಸಂದರ್ಭವನ್ನು ಕಿಡಿಗೇಡಿಗಳು ಸುದುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪ್ರವೀಣ್ ಫರ್ನಾಂಡೀಸ್ ದೂರು ನೀಡಿದ್ದಾರೆ.

Related posts

ಸುಳ್ಯ: ಪುಟ್ಟ ಕಂದಮ್ಮನ ಜೀವ ಉಳಿಸೋದಕ್ಕೆ ಝೀರೋ ಟ್ರಾಫಿಕ್..!, ಸುಳ್ಯದ ಜನತೆ ಸ್ಪಂದಿಸಿದ ರೀತಿಗೆ ಬಿಗ್ ಸೆಲ್ಯೂಟ್

ಚುನಾವಣೆಗೂ ಮುನ್ನವೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬೆಂಕಿ ಜ್ವಾಲೆ?

ಬಿಜೆಪಿಗೆ ಪರ್ಯಾಯವಾಗಿ ಹಿಂದೂಗಳ ಪ್ರತ್ಯೇಕ ಪಕ್ಷ ಬೇಕಾ? ಬೇಡ್ವಾ?