ನ್ಯೂಸ್ ನಾಟೌಟ್:ಮೈಸೂರಿನ ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಠಾಣೆ ಸಬ್ ಇನ್ಸ್ಪೆಕ್ಟರ್ ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ. ನಗರ ಪೊಲೀಸ್ ಆಯುಕ್ತರ ಕಚೇರಿಯ ಆಟೋಮೇಷನ್ ಸೆಂಟರ್‌ಗೆ ವರ್ಗಾವಣೆ ಮಾಡಿ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಪ್ರಕಟಿಸಿದ್ದಾರೆ.
ಗಲಾಟೆ ತಡೆಯಲು ಅವಕಾಶ ಇದ್ದರೂ ಕೂಡ ನಿರ್ಲಕ್ಷ್ಯ ವಹಿಸಿದ್ದರಿಂದ ಗಲಭೆ ನಡೆದಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್ ಆದ ನಂತರ ಸ್ಟೇಟಸ್ ಹಾಕಿದ್ದ ಆರೋಪಿ ಸತೀಶ್ ಆಲಿಯಾಸ್ ಪಾಂಡುರಂಗನನ್ನ ರೂಪೇಶ್ ಠಾಣೆಗೆ ಕರೆತಂದಿದ್ದರು.ಬೆಳಿಗ್ಗೆಯಿಂದ ಸಂಜೆಯವರೆಗೂ ಸತೀಶ್ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಕ್ಕೆ ಠಾಣೆ ಮುಂದೆ ಮುಸ್ಲಿಂ ಯುವಕರ ಗುಂಪು ಜಮಾಯಿಸಿ ಗಲಾಟೆ ನಡೆಸಿತ್ತು.