ಕರಾವಳಿಕೊಡಗುಪುತ್ತೂರು

ಅರುಣ್ ಪುತ್ತಿಲ ಫ್ಲೆಕ್ಸ್ ಗೆ ಕಾಣದ ಕೈಗಳಿಂದ ಕಲ್ಲು ತೂರಾಟ ,ರೊಚ್ಚಿಗೆದ್ದ ಅಭಿಮಾನಿಗಳು,ಸ್ಥಳಕ್ಕೆ ಅರುಣ್ ಪುತ್ತಿಲ ಭೇಟಿ

ನ್ಯೂಸ್ ನಾಟೌಟ್ :ಪುತ್ತೂರಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರುಣ್ ಪುತ್ತಿಲ ಅವರು ಚುಣಾವಣಾ ಫಲಿತಾಂಶದಲ್ಲಿ ವಿರೋಚಿತ ಸೋಲನ್ನುಂಡಿದ್ದರು.ಇದೀಗ ಪುತ್ತಿಲ ಅವರು ಮುಂಬರುವ ಲೋಕಸಭಾ ಚುನಾವಣೆಗೂ ನಿಲ್ಲಬೇಕು ಎನ್ನುವ ಇಂಗಿತವನ್ನು ಅವರ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಎಲ್ಲೆಡೆ ಅರುಣ್ ಪುತ್ತಿಲ ಪರವಾಗಿ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿದೆ.

ಇದರ ಬೆನ್ನಲ್ಲೇ ಅರುಣ್ ಪುತ್ತಿಲ ಅವರ ಫ್ಲೆಕ್ಸ್ ಗೆ ಕಲ್ಲು ತೂರಾಟ ನಡೆಸಿದ ಘಟನೆ ಕಾವು ಮೇಲಿನ ಪೇಟೆಯಲ್ಲಿ ನಡೆದಿದೆ. ಮೇ.16 ರಂದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಪೇಟೆಯಲ್ಲಿ ಕೆಲ ಕಾಲ ಅಶಾಂತಿ ವಾತಾವರಣವೇ ನಿರ್ಮಾಣವಾಯಿತು. ಜನ ಸೇರಿರುವಾಗಲೇ ಕಲ್ಲು ತೂರಾಟ ನಡೆಸಿದ್ದು, ಘಟನೆಯಿಂದ ಪುತ್ತಿಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ವೇಳೆ ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು.ವಿಷಯ ತಿಳಿದ ಕೂಡಲೇ ಅರುಣ್ ಪುತ್ತಿಲ ರವರು ಸ್ಥಳಕ್ಕೆ ತೆರಳಿ ಆಕ್ರೋಶಿತರನ್ನು ಸಮಾಧಾನಪಡಿಸಿದರು.ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುತ್ತಾರೆ ಎಂಬ ಬಗ್ಗೆ ಆಶ್ವಾಸನೆ ನೀಡಿದರು.

Related posts

ಕನಸು ಕಾಣ್ತಾ ಮರ್ಮಾಂಗವನ್ನೇ ಕತ್ತರಿಸಿಕೊಂಡ ಯುವಕ!

ಸುಳ್ಯ: ಯಶಸ್ವಿ 2 ನೇ ವ‍ರ್ಷಕ್ಕೆ ಪಾದಾರ್ಪಣೆಗೈದ ‘ಗೋಕುಲಂ’ ವಸ್ತ್ರ ಮಳಿಗೆ,’ಬಿಗ್ ಡಿಸ್ಕೌಂಟ್ ಮೇಳ’ದಲ್ಲಿ ಆಕರ್ಷಕ ದರದಲ್ಲಿ ಮುದ್ದು ಮಕ್ಕಳ ಬಟ್ಟೆಗಳು ಲಭ್ಯ

ಕಾಣೆಯಾಗಿದ್ದ ಬಾಲಕ ಬೆಂಗಳೂರಿನಲ್ಲಿ ಪತ್ತೆ