Latestಕ್ರೈಂಬೆಂಗಳೂರುವೈರಲ್ ನ್ಯೂಸ್

ತಂದೆಯಿಂದಲೇ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಕೊಲೆ ಪ್ರಕರಣ..! ಶಾದಿ ಡಾಟ್.ಕಾಮ್ ​ನಲ್ಲಿ ಸಿಕ್ಕವನಿಗೆ ಜೀವಾವಧಿ ಶಿಕ್ಷೆ

1.1k

ನ್ಯೂಸ್ ನಾಟೌಟ್: ಬೆಂಗಳೂರಿನ ಅಮೃತಹಳ್ಳಿ ಅಪ್ರಾಪ್ತ ಹೆಣ್ಣುಮಕ್ಕಳ ಡಬಲ್ ಮರ್ಡರ್ ಕೇಸ್​ಗೆ ಸಂಬಂಧಿಸಿದಂತೆ ಅಪರಾಧಿ ಮಲತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಎಂದು ಆದೇಶಿಸಿದೆ.

2024ರ ಆಗಷ್ಟ್ 24ರಂದು ಅಮೃತಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯರ ಕೊಲೆ ನಡೆದಿತ್ತು. ಈ ಕೊಲೆ ಮಾಡಿರೋದು ಕೋರ್ಟ್​ನಲ್ಲಿ ಸಾಬೀತಾಗಿತ್ತು. ಮಲಮಕ್ಕಳು ತಂದೆ ಅಂತಾ ಮರ್ಯಾದೆ ಕೊಡುತ್ತಿಲ್ಲ, ಹೇಳಿದ ಮಾತನ್ನ ಕೇಳುತ್ತಿಲ್ಲ ಎಂದು ಸುಮಿತ್ ಇಬ್ಬರು ಮಕ್ಕಳ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದ ಎನ್ನಲಾಗಿದೆ.

16 ವರ್ಷದ ಸೃಷ್ಟಿ, 14 ವರ್ಷದ ಸೋನಿಯಾಳನ್ನು ಕೊಲೆ ಮಾಡಿದ್ದ ಅಪರಾಧಿ ಸುಮಿತ್, ಈ ಹೆಣ್ಮಕ್ಕಳ ತಾಯಿ ಅನಿತಾ ಯಾದವ್ ​​ರನ್ನು ಎರಡನೇ ಮದುವೆಯಾಗಿದ್ದ.

ಅನಿತಾ ಯಾದವ್ ಮೊದಲ ಪತಿಗೆ ಡಿವೋರ್ಸ್ ಆಗಿ ಇಬ್ಬರು ಹೆಣ್ಣು ಮಕ್ಕಳಿದ್ದವು. ನಂತರ ಅನಿತಾಳಿಗೆ ಶಾದಿ ಡಾಟ್.ಕಾಮ್ ​ನಲ್ಲಿ ಸುಮಿತ್ ಪರಿಚಿತನಾಗಿದ್ದ. ಬಳಿಕ ಸುಮಿತ್ ಹಾಗೂ ಅನಿತಾ ಯಾದವ್ ಇಬ್ಬರು ಹೆಣ್ಮಕ್ಕಳೊಂದಿಗೆ ಕೆಂಪಾಪುರದಲ್ಲಿ ವಾಸವಿದ್ದರು.

ಮಕ್ಕಳು ಮೊಬೈಲ್ ​ನಲ್ಲಿ ಮಾತಾಡ್ತಿದಿದ್ದನ್ನು ಸುಮಿತ್ ಪ್ರಶ್ನೆ ಮಾಡಿದ್ದನಂತೆ. ನೀನು ನನ್ನ ತಂದೆಯಲ್ಲ, ನಿನಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಹೆಣ್ಮಕ್ಕಳು ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ಸುಮಿತ್ತ್ ಉಸಿರುಗಟ್ಟಿಸಿ ಚಾಕುವಿನಿಂದ ಕುತ್ತಿಗೆಕೊಯ್ದು ಹತ್ಯೆ ಮಾಡಿದ್ದ. ಸುಮಿತ್ ​ಗೆ ಬೆಂಗಳೂರಿನ 50ನೇ ಸಿಸಿಹೆಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಜೊತೆಗೆ 50 ಸಾವಿರ ದಂಡ ಕಟ್ಟುವಂತೆ ಆದೇಶಿಸಿದೆ.

ನಟಿ ಸಂಜನಾಗೆ 45 ಲಕ್ಷ ರೂ. ವಂಚನೆ..! ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು..!

 

See also  ವೃದ್ಧೆ ತಾಯಿಯನ್ನು ರಾತ್ರೋರಾತ್ರಿ ದೇಗುಲದೊಳಗೆ ಬಿಟ್ಟು ಓಡಿದ ಮಗಳು, ಅಳಿಯ..! ಯಾರೀ ಪಾಪಿ ಮಕ್ಕಳು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget