ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್ ಪರ ತೆಲುಗು ನಟ ನಾಗಶೌರ್ಯ ಹೇಳಿದ್ದೇನು..? ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲೇನಿದೆ..?

239

ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೀರೋ ದರ್ಶನ್ ಅರೆಸ್ಟ್ ಆಗಿ ಜೈಲು ಸೇರಿದ ಬಳಿಕ ಅನೇಕ ಪರ ವಿರೋಧ ಚರ್ಚೆಗಳು ಜೋರಾಗಿವೆ. ಈ ಪ್ರಕರಣದಲ್ಲಿ ಇವರೊಂದಿಗೆ ಮತ್ತೋರ್ವ ನಟಿ ಪವಿತ್ರಾ ಗೌಡ ಕೂಡ ಬಂಧಿತರಾಗಿದ್ದರು. ಅಲ್ಲದೇ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕುಟುಂಬಸ್ಥರಲ್ಲದೆ ಇತರ ಯಾರೇ ಬಂದರೂ ದರ್ಶನ್ ಭೇಟಿಗೆ ಅವಕಾಶ ನೀಡಲಾಗಿಲ್ಲ. ಈ ನಡುವೆ ದರ್ಶನ್ ಅವರನ್ನು ಬೆಂಬಲಿಸಿ ತೆಲುಗು ನಟ ನಾಗಶೌರ್ಯ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

ಮೃತರ (ರೇಣುಕಾಸ್ವಾಮಿ) ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಆದರೆ ಈ ಕೇಸ್ ನಲ್ಲಿ ಎಲ್ಲರೂ ಈಗಾಗಲೇ ಒಂದು ಅಭಿಪ್ರಾಯಕ್ಕೆ ಬಂದಿರುವುದು ನನಗೆ ನಿಜವಾಗಿಯೂ ಇಷ್ಟವಾಗುತ್ತಿಲ್ಲ. ಏಕೆಂದರೆ ನನಗೆ ತಿಳಿದ ಮಟ್ಟಿಗೆ ದರ್ಶನ್ ಯಾರಿಗೂ ತೊಂದರೆ ಕೊಡುವ ವ್ಯಕ್ತಿಯಲ್ಲ. ಕನಸಿನಲ್ಲಿಯೂ ಅವರು ಹಾಗೆ ಯೋಚಿಸುವುದಿಲ್ಲ. ಅವರು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಎಂದು ಹೇಳಿದ್ದಾರೆ.

ಅಲ್ಲದೇ, ದರ್ಶನ್ ಅಣ್ಣ ಏನೆಂದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ಕಷ್ಟಕಾಲದಲ್ಲಿ ಹಲವರಿಗೆ ಸಹಾಯ ಮಾಡಿದ್ದಾರೆ. ದರ್ಶನ್ ಅಣ್ಣನ ಮೇಲೆ ಬರುತ್ತಿರುವ ಸುದ್ದಿಗಳನ್ನು ನಾನು ನಂಬುವುದಿಲ್ಲ. ನನಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಸದ್ಯದಲ್ಲೇ ಸತ್ಯ ಹೊರಬೀಳಲಿದೆ ಎಂದು ನಾಗಶೌರ್ಯ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/actor-darshan-in-jail-accused-number-is-in-trendingkannada-news
https://newsnotout.com/2024/06/drupadi-murmu-kannada-news-healthcare-from-govt-announced-by-president
https://newsnotout.com/2024/06/sea-flood-issue-ullala-house-collapsed-kannada-news-sea-bank-slide
See also  60 ಲಕ್ಷ ರೂ.ಗೆ ಹಲ್ಲಿ ಮಾರಾಟ ಮಾಡಲು ಯತ್ನ!:ಮೂವರನ್ನು ಬಂಧಿಸಿದ ಪೊಲೀಸರು,ಈ ಹಲ್ಲಿಯ ವಿಶೇಷತೆಯೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget