Uncategorized

ಮದ್ಯಪಾನ ಸೇವಿಸಿ ಯದ್ವಾ ತದ್ವಾ ಜೀಪು ಓಡಿಸಿ ಕುಡುಕನ ಅವಾಂತರ

ನ್ಯೂಸ್ ನಾಟೌಟ್ : ಜೀಪು ಚಾಲಕನ ಅವಾಂತರಕ್ಕೆ ನಾಲ್ಕು ಬೈಕ್ ಮತ್ತು ಒಂದು ಕಾರು ಡಿಕ್ಕಿಯಾದ ಘಟನೆ ಸುಳ್ಯದ ಅಂಬಟಡ್ಕದಲ್ಲಿ ನಡೆದಿದೆ.

ಸುಳ್ಯದ ಮುಖ್ಯ ರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಾಸ್ಥಾನದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ಗೆ ಗುದ್ದಿದೆ. ನಂತರ ಅಲ್ಲಿಂದ ಅಂಬಟಡ್ಕಲ್ಲಿರುವ ಹೊಟೇಲ್ ಒಂದರ ಎದುರು ನಿಲ್ಲಿಸಿದ್ದ ಗ್ರಾಹಕರ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ.

ಜೀಪು ಚಾಲಕ ವಿಪರೀತ ಕುಡಿದು ಜೀಪು ಚಲಾಯಿಸುತ್ತಿದ್ದು ಅವಾಂತರ ಸೃಷ್ಟಿಗೆ ಕಾರಣನಾಗಿದ್ದಾನೆ. ಸ್ಥಳಕ್ಕೆ ಸುಳ್ಯ ಪೊಲೀಸರು ಧಾವಿಸಿ ಎಲ್ಲಾ ವಾಹನಗಳನ್ನು ಠಾಣೆಗೆ ಒಯ್ಯಲಾಗಿದೆ ಎಂದು ತಿಳಿದು ಬಂದಿದೆ.

Related posts

ಜೂನ್ 3ನೇ ವಾರ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ

ಡಿ.25 ಮತ್ತು 26 ರಂದು ಕೆ.ವಿ.ಜಿ. ಸುಳ್ಯ ಹಬ್ಬ, ಆಮಂತ್ರಣ ಪತ್ರಿಕೆ ಬಿಡುಗಡೆ

ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕುಂತೂರು ನೇಮಕ