ಕರಾವಳಿ

ಕೇರಳ: ಜೋರು ಹಸಿವಾಗ್ತಿದೆಯೆಂದು ಬೆಕ್ಕನ್ನೇ ತಿಂದು ಮುಗಿಸಿಬಿಟ್ಟ..!ಅಷ್ಟಕ್ಕೂ ಯುವಕನ ಈ ನಿರ್ಧಾರಕ್ಕೆ ಕಾರಣವೇನು?ಏನಿದು ಮನಕಲಕುವ ಘಟನೆ?

188

ನ್ಯೂಸ್ ನಾಟೌಟ್‌ : ಮನುಷ್ಯ ಜೋರಾಗಿ ಹಸಿವಾದಾಗ ಊಟ ಮಾಡ್ತಾನೆ. ತಪ್ಪಿದ್ರೆ ಜಂಕ್ ಫುಡ್ಡೋ ಅಥವಾ ಪ್ರೋಟ್ರ್ಸ್ ಇಲ್ಲವೇ ಏನಾದರೂ ತಿಂಡಿ ತಿನಿಸುಗಳನ್ನು ತಿನ್ನಬಹುದು.ಆದರೆ ಹಸಿ ಬೆಕ್ಕನ್ನು ತಿಂದ ಉದಾಹರಣೆ ಬಗ್ಗೆ ನೀವೇನಾದ್ರೂ ಕೇಳಿದ್ದೀರಾ.. ಇಲ್ಲ ಅಲ್ವ.. ಹೌದು, ಇಂತಹ ಅಪರೂಪದ ಘಟನೆಯೊಂದು ನೆರೆಯ ಕೇರಳದಲ್ಲಿ ನಡೆದಿದೆ.

ಉತ್ತರ ಕೇರಳ ಜಿಲ್ಲೆಯ ಕುಟ್ಟಿಪ್ಪುರಂನಲ್ಲಿ ಕಳೆದ ಐದು ದಿನಗಳಿಂದ ತಿನ್ನಲು ಏನೂ ಸಿಗದೇ ಹಸಿವಿನಿಂದ ಕಂಗೆಟ್ಟಿದ್ದ ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಬೆಕ್ಕಿನ ಹಸಿ ಮಾಂಸವನ್ನು ಸೇವಿಸಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ.ಇಲ್ಲಿನ ಜನನಿಬಿಡ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಅಸ್ಸಾಂನ ಧುಬ್ರಿ ಜಿಲ್ಲೆಯ 27 ವರ್ಷದ ವ್ಯಕ್ತಿ ಬೆಕ್ಕಿನ ಹಸಿ ಮಾಂಸ ತಿನ್ನುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಈ ದೃಶ್ಯವನ್ನು ಗಮನಿಸಿದ್ದು,ಪೊಲೀಸರು ಇದನ್ನು ದೃಢ ಪಡಿಸಿದ್ದಾರೆ.”ಮಾಹಿತಿ ಸಿಕ್ಕ ನಂತರ ನಾವು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಆ ವ್ಯಕ್ತಿಯನ್ನು ವಿಚಾರಿಸಿದಾಗ, ಕಳೆದ ಐದು ದಿನಗಳಿಂದ ಯಾವುದೇ ಆಹಾರವನ್ನು ಸೇವಿಸಿಲ್ಲ. ಹೀಗಾಗಿ ಹಸಿವು ತಾಳದೇ ಬೆಕ್ಕಿನ ಮಾಂಸ ತಿಂದಿರುವುದಾಗಿ ಹೇಳಿದ್ದಾನೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದಾದ ಬಳಿಕ ಪೊಲೀಸರು, ಅಲ್ಲಿಯೇ ಆ ವ್ಯಕ್ತಿಗೆ ಊಟ ಕೊಡಿಸಿದ್ದಾರೆ ಮತ್ತು ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ಸ್ವೀಕರಿಸಿದ್ದಾನೆ. ಬಳಿಕ ಆ ವ್ಯಕ್ತಿ ಬಗ್ಗೆ ವಿಚಾರಿಸಿದಾಗ, ಆತ ಅಸ್ಸಾಂನ ಧುಬ್ರಿ ಜಿಲ್ಲೆಯವನು ಅನ್ನೋದು ತಿಳಿದುಬಂದಿದೆ. ಆತ ತನ್ನ ಡಿಟೇಲ್ಸ್‌ ಬಗ್ಗೆಯೂ ಹೇಳಿಕೊಂಡಿದ್ದು,ತಾನು ಕಾಲೇಜು ವಿದ್ಯಾರ್ಥಿಯಾಗಿದ್ದು, ಕಳೆದ ಡಿಸೆಂಬರ್‌ನಲ್ಲಿಯೇ ಇಲ್ಲಿಗೆ ಬಂದಿದ್ದೇನೆ. ಈ ಬಗ್ಗೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿಲ್ಲ. ಹೇಳದೇ ಕೇಳದೆ ರೈಲು ಹತ್ತಿ ಕೇರಳ ತಲುಪಿದೆ ಎಂದಿದ್ದಾನೆ.

ಚೆನ್ನೈನಲ್ಲಿ ತನ್ನ ಬಂಧುಗಳು ಇದ್ದಾರೆ ಎಂದು ಯುವಕ ತಿಳಿಸಿದ್ದು,ಅವರ ಮೊಬೈಲ್​ ಸಂಖ್ಯೆ ಪಡೆದು ಸಂಪರ್ಕಿಸಲಾಗಿದೆ. ನಡೆದ ಘಟನೆಯ ಬಗ್ಗೆ ಅವರಿಗೂ ಮಾಹಿತಿ ನೀಡಲಾಗಿದೆ. ಈತನ ಸಂಬಂಧಿಕರು ಬಂದ ಬಳಿಕ ಅವರಿಗೆ ಯುವಕನನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

See also  ಸುಳ್ಯ: ಮುಂದೆ ಹೋಗುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ, ಎರಡೂ ಕಾರು ಜಖಂ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget