Latestಸುಳ್ಯ

ಗುತ್ತಿಗಾರು: ಬೃಹತ್ ರಕ್ತದಾನ ಶಿಬಿರ, ಸನ್ಮಾನ ಮತ್ತು ರಕ್ತ ದಾನಿಗಳಿಗೆ ಗೌರವ ಸಮರ್ಪಣೆ, ರಕ್ತದಾನ ಮಾಡುವ ಮೂಲಕ ಠಾಣಾಧಿಕಾರಿಯ ಮಾದರಿ ನಡೆ, ಯುವ ಸಮುದಾಯ ಮತ್ತು ಹಿರಿಯರು ಸಾಥ್

286
Spread the love

ನ್ಯೂಸ್‌ ನಾಟೌಟ್: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ, ಸನ್ಮಾನ ಹಾಗೂ ರಕ್ತದಾನಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್ ಗುತ್ತಿಗಾರು, ಅರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ ಅಮರ ಸಂಜೀವಿನಿ ಗ್ರಾಮದ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ಸಪ್ತ ಶ್ರೀ ಗುತ್ತಿಗಾರು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಈ ಸಂದರ್ಭದಲ್ಲಿ ಒಟ್ಟು 44ಜನ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಪುನರ್ಜನ್ಮ ನೀಡಿದರು.

ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರನ್ನು ಗೌರವಿಸಲಾಯಿತು. ಈ ವೇಳೆ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ, ನಿವೃತ್ತ ಸೇನಾ ಯೋಧ ಮಹೇಶ್ ಕೊಪ್ಪತಡ್ಕ,ಲಯನ್ಸ್ ಕ್ಲಬ್ ಹಿರಿಯಡ್ಕ ಇದರ ಅಧ್ಯಕ್ಷ ಸುರೇಂದ್ರ ಹೆಗ್ಡೆ, ಬಾಲಕೃಷ್ಣ ಹೆಗ್ಡೆ, ಸುಳ್ಯ ತಾಲೂಕು ರೆಡ್ ಕ್ರಾಸ್ ಪದಾಧಿಕಾರಿಗಳು ಆದ ಶಿವಪ್ರಸಾದ್. ಕೆ. ವಿ. ವಿನಯ್ ಬೆಳ್ಳಾರೆ, ಅಮರ ಯೋಗ ಕೇಂದ್ರದ ಶಿಕ್ಷಕ ಶರತ್ ಮರ್ಗಿಲಡ್ಕ, ಸಪ್ತ ಶ್ರೀ ಅಧ್ಯಕ್ಷ ರಿತೇಶ್ ಕೊರಂಬಡ್ಕ, ಅಮರ ಸಂಜೀವಿನಿ ಸಂಘದ ಅಧ್ಯಕ್ಷೆ ರಮಿತ ಆಚಳ್ಳಿ,ಉಪಸ್ಥಿತರಿದ್ದರು.

ಮೋಹನ್ ದಾಸ್ ಶಿರಾಜೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಹೆಮ್ಮೆಯ ರಕ್ತದಾನಿ ಹಲಸೂರು ಗೇಟ್ ಬೆಂಗಳೂರು ಇಲ್ಲಿಯ ಪೊಲೀಸ್ ಠಾಣಾಧಿಕಾರಿ ಪ್ರದೀಪ್ ಕೊಲ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಬಾಬು ಗೌಡ ಅಚ್ರಪ್ಪಾಡಿ, ಬಿ. ಇ. ಯಂ. ಲ್ ನಿವೃತ್ತ ಎಂಜಿನಿಯರ್ ತಿರುಮಲೇಶ್ವರ ಮುಂಡೋಡಿ, ಅಮರ ಸಂಜೀವಿನಿ ಪ್ರತಿನಿಧಿ ಮಿತ್ರ ಚಿಕ್ಮುಳಿ ಜಿಲ್ಲಾ ರೆಡ್ ಕ್ರಾಸ್ ಪ್ರತಿನಿಧಿ ಪ್ರವೀಣ್,ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ರಾಜೇಶ್ ಉತ್ರಂಬೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಕೋಶಾಧಿಕಾರಿ ಸುಕುಮಾರ್ ಕುಡುಂಬು,ಮತ್ತು ಜಂಟಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ದಿವ್ಯಾ ಹರೀಶ್ ಚತ್ರಪ್ಪಾಡಿ ಪ್ರಾರ್ಥನೆ ಸಲ್ಲಿಸಿದರು. ಕಲ್ಪನ ಎರ್ದಡ್ಕ ಹಾಗೂ ಅಭಿಲಾಷ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಣೆ ಮಾಡಿದ್ದರು.

 

See also  ಸುಳ್ಯ: ಹಣ, ದಾಖಲಾತಿ, ಎಟಿಎಂ ಕಾರ್ಡ್ ಇರುವ ಪರ್ಸ್ ಬಿದ್ದು ಸಿಕ್ಕಿದೆ, ವಾರಿಸುದಾರರು ನ್ಯೂಸ್ ನಾಟೌಟ್ ಕಚೇರಿ ಸಂಪರ್ಕಿಸಿ
  Ad Widget   Ad Widget   Ad Widget