ಕರಾವಳಿಕ್ರೈಂ

ಕೊಕ್ಕಡ: SSLC ವಿದ್ಯಾರ್ಥಿನಿ ಪುತ್ತೂರಿನ ಹಾಸ್ಟೆಲ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ..! 15 ವರ್ಷದ ಹುಡುಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇಕೆ?

324

ನ್ಯೂಸ್ ನಾಟೌಟ್: SSLC ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರಿನ ಹಾಸ್ಟೆಲ್‌ ವೊಂದರಲ್ಲಿ ನಡೆದಿದೆ.

ಈಕೆ ಮೂಲತಃ ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ ಪುಷ್ಪ ದಂಪತಿ ಪುಪ್ಷ ದಂಪತಿ ಪುತ್ರಿ ರೇಖಾ (15) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ರೇಖಾ ಅವರ ತಾಯಿ ಪುಷ್ಪ ಕಳೆದ ವರ್ಷ ತೀರಿಕೊಂಡಿದ್ದರು. ಅವರು ತೀರಿದ ಬಳಿಕ ರೇಖಾ ಅವರಲ್ಲಿ ಬಹಳಷ್ಟು ಬದಲಾವಣೆಯಾಗಿತ್ತು. ಒಂದು ರೀತಿಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ತಿಳಿದು ಬಂದಿದೆ. ಈಕೆ ಕೊಕ್ಕಡ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು. ಕೆಲವು ದಿನಗಳ ಹಿಂದೆ ಈಕೆಯ ಅತ್ತೆ ಒತ್ತಾಯದ ಮೇರೆಗೆ ಪುತ್ತೂರಿನ ಹಾಸ್ಟೆಲ್‌ಗೆ ಸೇರುವಂತೆ ಹೇಳಿದ್ದರು. ಕೊನೆಗೂ ಒತ್ತಾಯದಿಂದ ಆಕೆ ಹಾಸ್ಟೆಲ್ ಸೇರಿಕೊಂಡಿದ್ದಳು ಎನ್ನಲಾಗಿದೆ. ಹಾಸ್ಟೆಲ್ ನಲ್ಲಿ ನನಗೆ ಇರುವುದಕ್ಕೆ ಇಷ್ಟವಿಲ್ಲ. ಇಂಗ್ಲಿಷ್ ಕಷ್ಟದ ವಿಷಯ ಎಂದು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದಳು ಎನ್ನಲಾಗಿದೆ.

See also  ಚೈತ್ರಾ ಕುಂದಾಪುರ ಆಪ್ತನ ಮನೆಯಲ್ಲಿ ಸಿಕ್ತು 41 ಲಕ್ಷ ರೂ..! ಮೈಸೂರಿನಲ್ಲಿ ಕಾರ್ ನಿಲ್ಲಿಸಿ ನಂಬರ್ ಪ್ಲೇಟ್ ತೆಗೆದು ಸ್ವಾಮೀಜಿ ಹೋಗಿದ್ದೆಲ್ಲಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget