Latestಕೊಡಗುಶಿಕ್ಷಣ

ಸಂಪಾಜೆ: ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ SSLCಯಲ್ಲಿ ಅದ್ಭುತ ಸಾಧನೆ..! ಇಲ್ಲಿದೆ ಸಂಪೂರ್ಣ ಮಾಹಿತಿ

1.5k

ನ್ಯೂಸ್ ನಾಟೌಟ್: ಸಂಪಾಜೆಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಕೊಡಗು ಸಂಪಾಜೆಯ ಪ್ರೌಢಶಾಲಾ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಲ್ಲಿ, ಸುಪ್ರಿತಾ.ಹೆಚ್.ಆರ್ 625 ರಲ್ಲಿ 593 ಅಂಕ (94.88%) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಶರಣ್ಯ ಡಿ 581 ಅಂಕ (92.96.%) ಗಳಿಸಿದ್ದಾರೆ. ದೀಕ್ಷಾ.ವೈ.ಎಸ್ 565 ಅಂಕ (90.04%) ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಶಾಹಿನಾ. ಎಸ್.ಆರ್ 559 ಅಂಕ (89.44%), ಬಿಂದ್ಯ.ಕೆ.ಆರ್ 541 ಅಂಕ (86.56%), ಗ್ರೀಷ್ಮಾ ಪಿ.ಜೆ 536 ಅಂಕ (85.76%), ದಿನ್ ರಾಜ್ ಬಿ.ಜೆ 515 ಅಂಕ (82.4%)ಗಳನ್ನು ಪಡೆದು ಕ್ರಮವಾಗಿ 4,5,6,7ನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ 2025 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಧಿಕೃತ ಫಲಿತಾಂಶವನ್ನು ಮೇ2ರಂದು ಪ್ರಕಟಿಸಲಾಗಿತ್ತು. ಇದರಲ್ಲಿ ಎಂದಿನಂತೆ ದಕ್ಷಿಣ ಕನ್ನಡ ಪ್ರಥಮ ಮತ್ತು ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿವೆ. ಅಂತೆಯೇ ಕೊಡಗು ಜಿಲ್ಲೆ 5ನೇ ಸ್ಥಾನವನ್ನು ಪಡೆದುಕೊಂಡಿತ್ತು.

 

See also  ಶಾಲೆಗಳ ಸಮಯ ಬದಲಾವಣೆಯಾಗುತ್ತಾ..? ಈ ಬಗ್ಗೆ ಹೈಕೋರ್ಟ್ ಹೇಳಿದ್ದೇನು? ಈ ನಿರ್ಧಾರಕ್ಕೆ ಕಾರಣವೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget