ಕರಾವಳಿಬೆಂಗಳೂರುಶಿಕ್ಷಣ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ

ನ್ಯೂಸ್‌ ನಾಟೌಟ್‌: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಶೇ.83.89 ರಷ್ಟು ಫಲಿತಾಂಶ ಬಂದಿದೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಒಟ್ಟು 3,59,511 ಬಾಲಕಿಯರು ತೇರ್ಗಡೆ. 3,41,101 ಬಾಲಕರು ತೇರ್ಗಡೆಯಾಗಿದ್ದಾರೆ. 61,003 ವಿದ್ಯಾರ್ಥಿಗಳಿಗೆ ಎ ಗ್ರೇಡ್‌ ಸಿಕ್ಕಿದೆ. 23 ಜಿಲ್ಲೆಗಳು ಎ ಗ್ರೇಡ್‌ ಫಲಿತಾಂಶ ಪಡೆದುಕೊಂಡಿವೆ. ನಾಲ್ವರು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ ಲಭಿಸಿದೆ. ಒಟ್ಟು 7 ಲಕ್ಷ 619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಚಿತ್ರದುರ್ಗ ಪ್ರಥಮ (ಶೇ. 96.80), ಮಂಡ್ಯ ದ್ವಿತೀಯ (ಶೇ.96.74) ಮತ್ತು ಹಾಸನ ಮೂರನೇ ಸ್ಥಾನ (ಶೇ.96.68) ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಕಳೆದ ಮಾರ್ಚ್ 31 ರಿಂದ ಫೆಬ್ರವರಿ 15 ರವರೆಗೂ ಪರೀಕ್ಷೆ ನಡೆದಿತ್ತು.

Related posts

ಕೇರಳದ ನ್ಯಾಯಾಧೀಶರ ಎದುರು ಸುಳ್ಯದ ವೈದ್ಯೆಯ ಉದ್ದಟತನ..!, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ನ್ಯಾಯಾಧೀಶ, ಪ್ರಕರಣ ದಾಖಲು

ಪೆರಾಜೆ: ಕಾಲು ಸಂಕದಿಂದ ಜಾರಿ ಬಿದ್ದು ಯುವಕ ಸಾವು, ಕಣ್ಣೀರಾದ ಬಂಧು ಬಳಗ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ, ಉತ್ತಮ ವೇತನದೊಂದಿಗೆ ಪ್ರತೀ ತಾಲೂಕಿಗೆ ಎಐ ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ