Uncategorized

ಎಸ್ ಎಸ್‌ ಎಲ್ ಸಿ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ

ಬೆಂಗಳೂರು: 2021–22ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಲ್ಲೇಶ್ವರದಲ್ಲಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆ ನಂತರ https://karresults.nic.in/ ಮತ್ತು  www.kseeb.kar.nic.in ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನದ ನಂತರ ಆಯಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ನೋಂದಾ ಯಿಸಿಕೊಂಡಿರುವ ಫೋನ್ ನಂಬರ್ ಗಳಿಗೆ ಎಸ್ಎಂಎಸ್ ಮೂಲಕವೂ ಫಲಿತಾಂಶ ಕಳುಹಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ವರ್ಷ ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ನಡೆದ ಪರೀಕ್ಷೆಗೆ ರಾಜ್ಯದಾದ್ಯಂತ 8.73 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

Related posts

ಅಮರ ಯೋಗ ತರಬೇತಿ  ಕೇಂದ್ರ ಉದ್ಘಾಟನೆ

ಠಾಣೆಯ ಮೇಲೇರಿ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ, ಜೀವ ಕಾಪಾಡಿದ ಆರಕ್ಷಕರು!,ಅಷ್ಟಕ್ಕೂ ಅಲ್ಲೇನು ನಡೆದಿತ್ತು?

ಅನಂತಪುರದಲ್ಲಿ ಕಾಣಿಸಿಕೊಂಡ ಮರಿ ಮೊಸಳೆಗೂ ‘ಬಬಿಯಾ’ ಹೆಸರು..!ಭಕ್ತರ ಮುಂದೆ ಪ್ರತ್ಯಕ್ಷವಾಗಿ ದೇವಸ್ಥಾನದ ನೈವೇದ್ಯ ಸ್ವೀಕಾರ ..!