Uncategorized

ಎಸ್.ಎಸ್.ಎಲ್.ಸಿ ಫಲಿತಾಂಶ : ಗುತ್ತಿಗಾರಿನ ಅನನ್ಯ ರಾಜ್ಯಕ್ಕೆ ಪ್ರಥಮ

ಸುಳ್ಯ ; ಎಸ್.ಎಸ್.ಎಲ್ ಸಿ  ಫಲಿತಾಂಶ ಪ್ರಕಟಗೊಂಡಿದ್ದು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಅನನ್ಯ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ರಾಜ್ಯದ 157 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದು ಅವರಲ್ಲಿ ಅನನ್ಯ ಕೂಡ ಒಬ್ಬರಾಗಿರುವುದು ವಿಶೇಷ. ಈಕೆ ಗುತ್ತಿಗಾರು ಗ್ರಾಮದ ಮಣಿಯಾನ ಮನೆಯ ದುರ್ಗೆಶ್ ಹಾಗೂ ವೇದಾವತಿ ದಂಪತಿ ಪುತ್ರಿ. ಪ್ರಸಕ್ತ ಎಸ್.ಎಸ್.ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿ ಶೇ.99.9ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೋವಿಡ್ ಕಾರಣದಿಂದ ಈ ಬಾರಿ ಎರಡೇ ದಿನದಲ್ಲಿ ಪರೀಕ್ಷೆ ಮುಗಿಸಲಾಗಿತ್ತು. ಕೊರೋನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಗಿತ್ತು.

Related posts

ನಿವೃತ್ತಿಯ ಬಳಿಕವೂ ಜನರು ಸೇವೆ ಗುರುತಿಸುವಂತಾಗಬೇಕು: ಮಹೇಂದ್ರ ಮೌರ್ಯ

ಹಠಾತ್‌ ಅಸುನೀಗಿದ ಹಿರಿಯ ಪತ್ರಕರ್ತ ಭುವನೇಂದ್ರ ಪುದುವೆಟ್ಟು..!

23 ವರ್ಷದ ಖ್ಯಾತ ನಟಿ ತಾಯಿಗೆ ಹೆಣ್ಣು ಮಗು ಜನನ,47ನೇ ವಯಸ್ಸಿಗೆ ಅಮ್ಮನ ಹೊಟ್ಟೆಯಿಂದ ತಂಗಿ ಬಂದಳು- ಅಕ್ಕನ ಪೋಸ್ಟ್ ವೈರಲ್