ಭಕ್ತಿಭಾವ

19ನೇ ಶತಮಾನದ ಬ್ಯಾಂಕ್ ಚೆಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್!ಶ್ರೀರಾಮಚಂದ್ರ ಮತ್ತು ಲಕ್ಷಣ್ ಹೆಸರಿನ ಈ ಬ್ಯಾಂಕ್ ಚೆಕ್‌ನ ವಿಶೇಷತೆಗಳೇನು?

277

ನ್ಯೂಸ್‌ ನಾಟೌಟ್‌ : ರಾಮಮಂದಿರ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭ ರಾಮ ಭಕ್ತರು ಸಂಭ್ರಮಿಸಿದ್ದರು. ಈ ವೇಳೆ ಯಾರೋ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಶ್ರೀರಾಮಚಂದ್ರ ಮತ್ತು ಆತನ ಸಹೋದರ ಲಕ್ಷಣ್ ಹೆಸರಿನಲ್ಲಿ ಚೆಕ್ ಬರೆದಿದ್ದು ಸದ್ಯ ಭಾರಿ ಕುತೂಹಲದ ಕೇಂದ್ರ ಬಿಂದುವಾಗಿದೆ. ಈ ಚೆಕ್ ನಿಜಕ್ಕೂ ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಎನ್ನುವ ಹೆಸರಿನಲ್ಲೇ ಇದೆ. ರಾಮ-ಲಕ್ಷ್ಮಣರ ಭಾವಚಿತ್ರದೊಂದಿಗೆ ಇರುವ ಈ ಚೆಕ್ ಅಸಲಿ ಎನ್ನುವುದು ಕೂಡ ಸದ್ಯಕ್ಕೆ ಸಾಬೀತಾಗಿದೆ.

ರಾಜಾಸ್ಥಾನದ ಡುಂಗರಪುರದ ಮಹಾರಾಜರ ಕಾಲದಲ್ಲೂ ಬ್ಯಾಂಕುಗಳು ಇದ್ದವು. ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಹೆಸರಿನ ಬ್ಯಾಂಕ್ ಕೂಡ ಇತ್ತು ಎನ್ನುವುದು ಇದೀಗ ಸುದ್ದಿಯಾಗಿದೆ. ಆ ಬ್ಯಾಂಕ್ ಹೆಸರಿನಲ್ಲಿ ಕೊಟ್ಟಿದ್ದ ಅಸಲಿ ಚೆಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹವಾ ಕ್ರಿಯೆಟ್‌ ಮಾಡಿದೆ.

19ನೇ ಶತಮಾನದ ಕಾಲದಲ್ಲಿ ಎನ್ನಲಾದ ಚೆಕ್ ಇದು ಎಂದು ಹೇಳಲಾಗುತ್ತಿದೆ. ಡುಂಗರಪುರ ಮಹಾರಾಜ ಮಹಾರಾವಲ್ ಲಕ್ಷ್ಮಣ್ ಸಿಂಗ್ ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಸ್ಥಾಪಿಸಿದ್ದ ಎನ್ನಲಾಗಿದ್ದು ಆ ಚೆಕ್ ಫೋಟೋ ಈಗ ವೈರಲ್ ಆಗಿದೆ. ಬ್ಯಾಂಕ್ ಹೆಸರು ಜತೆಗೆ ಹೆಸರು ಕೂಡ ಎರಡೂ ಶ್ರೀರಾಮನ ಹೆಸರಿನಲ್ಲಿ ನಡೆಯುತ್ತಿತ್ತು. ಹಲವು ದಶಕಗಳಿಂದ ಅಸ್ತಿತ್ವದಲ್ಲಿದ್ದ ಈ ಬ್ಯಾಂಕ್ ಅನ್ನು ಸ್ವಾತಂತ್ರ್ಯ ಬಂದ ನಂತರ ಇತರೆ ಬ್ಯಾಂಕ್ ಜೊತೆ ವಿಲೀನಗೊಳಿಸಲಾಯಿತು.

ಇದರ ವಿನ್ಯಾಸ ತುಂಬಾ ಆಕರ್ಷಕಮಯವಾಗಿದೆ. ಚೆಕ್ ಮೇಲೆ ಸೀತಾರಾಮನ ಚಿತ್ರವಿತ್ತು. ಈ ಚೆಕ್ ಗಳನ್ನು ಲಕ್ನೋದ ಏನ್ ಕೆ ಪ್ರೆಸ್ ನಲ್ಲಿ ಮುದ್ರಿಸಲಾಗುತ್ತಿತ್ತು. ರಾಜರ ಕಾಲದ ಬ್ಯಾಂಕುಗಳಿಗೆ ಯಾವುದೇ ಲಿಖಿತ ಸಂವಿಧಾನ ಇರಲಿಲ್ಲ. ಅನೇಕ ರಾಜರುಗಳ ಜೊತೆ ಸಾರ್ವಜನಿಕರು ಕೂಡ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರು ಅನ್ನೋದೇ ವಿಶೇಷ.

See also  ಕೊರಗಜ್ಜನ ಪವಾಡ..! ನಾಪತ್ತೆಯಾಗಿದ್ದ ಚಿನ್ನದುಂಗುರವನ್ನು ಕೇವಲ 24 ಗಂಟೆಯೊಳಗೆ ವಾಪಸ್ ಸಿಗುವಂತೆ ಮಾಡಿದ ತುಳುನಾಡಿನ ಸತ್ಯದೈವ..!, ರೂ. 30,000 ಮೌಲ್ಯದ ಚಿನ್ನದುಂಗುರ ಮರಳಿ ಸಿಕ್ಕಿದ್ದೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget