ನ್ಯೂಸ್ ನಾಟೌಟ್ : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾದ ಸಾನಿಯಾ ಅವರೊಂದಿಗಿನ ಈ ನಿಶ್ಚಿತಾರ್ಥ ಸಮಾರಂಭ ಸರಳವಾಗಿ ನಡೆದಿದೆ. ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದಿದ್ದಾದರೂ ಎರಡೂ ಕುಟುಂಬಗಳು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
#ArjunTendulkar, son of former India captain and cricket icon @sachin_rt, has got engaged to #SaaniyaChandok, the granddaughter of prominent Mumbai businessman Ravi Ghai.
The engagement was a private affair, attended by close friends and family from both sides.
Arjun, 25, is a… pic.twitter.com/FW2EKGKGAM
— IndiaToday (@IndiaToday) August 13, 2025
ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿರುವ ಅರ್ಜುನ್ ತೆಂಡೂಲ್ಕರ್ ಇದುವರೆಗೂ ರಣಜಿ ತಂಡವನ್ನು ಬಿಟ್ಟು, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಅರ್ಜುನ್ಗೆ 2024 ರ ಐಪಿಎಲ್ ಆವೃತ್ತಿಯಲ್ಲಿ ಕೆಲವು ಅವಕಾಶಗಳು ಸಿಕ್ಕಿದ್ದವು. ಆದರೆ ಆ ಅವಕಾಶಗಳಲ್ಲಿ ಅರ್ಜುನ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಲಾಗಿತ್ತು.
ಇನ್ನು ಟಿ 20 ಕ್ರಿಕೆಟ್‌ನಲ್ಲಿ, 25 ವರ್ಷದ ಅರ್ಜುನ್ ತೆಂಡೂಲ್ಕರ್ 25.07 ರ ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 13.22 ರ ಸರಾಸರಿಯಲ್ಲಿ 119 ರನ್ ಕಲೆಹಾಕಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡದ ಭಾಗವಾಗಿರುವ ಅರ್ಜುನ್ ತೆಂಡೂಲ್ಕರ್ ಇದಕ್ಕೂ ಮೊದಲು ಮುಂಬೈ ಪರ ಆಡುತ್ತಿದ್ದರು. ಅರ್ಜುನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಪರ 5 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 3 ವಿಕೆಟ್‌ಗಳು ಮತ್ತು 13 ರನ್‌ಗಳನ್ನು ಗಳಿಸಿದ್ದಾರೆ.