ಕ್ರೀಡೆ/ಸಿನಿಮಾ

ಭಾರತದ ವೇಗದ ಬೌಲರ್ ಆರ್ಷದೀಪ್ ಸಿಂಗ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ

457

ನ್ಯೂಸ್ ನಾಟೌಟ್ : ಭಾರತದ ವೇಗದ ಬೌಲರ್ ವಿಕೆಟ್ ಸ್ಟಾರ್  ಆರ್ಷದೀಪ್ ಸಿಂಗ್ ಐಸಿಸಿ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ.ಭಾರತ ತಂಡ ಪ್ರತಿನಿಧಿಸಿ  ವೇಗದ ಬೌಲರ್ ಅಗಿದ್ದು, ತಂಡದ ಪರ ಅನೇಕ ವಿಜಯಗಳನ್ನು ಸಾಧಿಸಿದ್ದಾರೆ.

ಪ್ರಶಸ್ತಿಗೆ ಪೈಪೋಟಿ:

೨೧ ಟಿ ೨೦ ಪಂದ್ಯಗಳನ್ನು ಆಡಿರುವ ಸಿಂಗ್ ೧೮.೧೨ ರ ಸರಾಸರಿಯಲ್ಲಿ ೩೩ ವಿಕೆಟ್ ಗಳನ್ನು ಪಡೆದು ಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ ೨೦ ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.ಇದೀಗ  ಐಸಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೋಂಡಿದ್ದು,  ಭಾರತ ಕ್ರಿಕೆಟ್   ಆಟಗಾರರಲ್ಲಿ ಸಂತಸದ ವಾತಾವರಣ ಮೂಡಿದೆ. ಮಾರ್ಕೋ ಜೆನ್ಸೆನ್, ಫಿನ್ ಅಲೆನ್, ಮತ್ತು ಇಬ್ರಾಹಿಂ ಜದ್ರಾನ್ ಅವರೊಂದಿಗೆ  ಪ್ರಶಸ್ತಿಗೆ ಪೈಪೋಟಿ ನಡೆಸಲಿದ್ದು, ಪ್ರಶಸ್ತಿ ವಿಜೇತರ ಆಯ್ಕೆಗೆ ಜನವರಿ ತಿಂಗಳಲ್ಲಿ ಮತದಾನ ನಡೆಯಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

See also  ನಟಿ ಖುಷ್ಬೂ ಅತ್ತೆಯಿಂದ ಆಶಿರ್ವಾದ ಪಡೆದ ಮೋದಿ, ನಟಿ ಈ ಬಗ್ಗೆ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget