Uncategorized

ಮದುವೆ ಇದೆ, ಹನಿಮೂನ್ ಇದೆ, ಗಂಡ ಮಾತ್ರ ಇರಲ್ಲ..!

ನ್ಯೂಸ್ ನಾಟೌಟ್: ಗುಜರಾತ್ ನ ವಡೋದರಾ ನಗರದಲ್ಲಿ 24 ವರ್ಷದ ಕನ್ಯೆ ಜೂನ್ 11ರಂದು ಗುಜರಾತಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ತನ್ನನ್ನು ತಾನೇ ವಿವಾಹವಾಗುತ್ತಿರುವುದಾಗಿ ಘೋಷಿಸಿ, ಸಂಚಲನ ಮೂಡಿಸಿದ್ದಾರೆ.

‘ಸ್ವಯಂ ವಿವಾಹ’ ನೆರವೇರಿದರೆ ದೇಶದ ಮೊದಲ ಪ್ರಕರಣ ಎನಿಸಲಿದೆ. ಭಾರತದಲ್ಲಿ ‘ಏಕ ಪತ್ನಿತ್ವ’ ಅಥವಾ ಸ್ವಯಂ-ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತ.  ವಡೋದರಾದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರು ದ್ವಿಲಿಂಗಿಯಾಗಿ ಗುರುತಿಸಿಕೊಂಡಿದ್ದು, ಈ ಸ್ವಯಂ ಮದುವೆಗೆ, ಅವರ ಕುಟುಂಬವೂ ಎಲ್ಲ ಸಿದ್ಧತೆ ನಡೆಸುತ್ತಿದೆ. ವಡೋದರಾದ ಕಲ್ಯಾಣ ಮಂಟಪದಲ್ಲಿ ಮದುವೆ, ಗೋವಾದಲ್ಲಿ ಮದುಚಂದ್ರ ನಡೆಯಲಿದೆ.   

‘ನನಗೆ ವರನ ಜತೆಗೆ ವಿವಾಹ ಇಷ್ಟವಿಲ್ಲ. ಜೀವನ ಪೂರ್ತಿ ಏಕಾಂಗಿಯಾಗಿರುವೆ. ದೇಶದಲ್ಲಿ ಇಲ್ಲಿಯವರೆಗೂ ಯಾರೂ ಕೂಡ ಸ್ವಯಂ ಮದುವೆಯಾಗಿಲ್ಲ, ನಾನೇ ಮೊದಲ ನಿದರ್ಶನ’ ಎಂದು ಕ್ಷಮಾ ಹೇಳಿಕೊಂಡಿದ್ದಾರೆ.   

Related posts

ಬಂಟ್ವಾಳ : ಅಡಿಕೆ ಮರದ ಸಲಾಕೆಯಿಂದ ಹೊಡೆದು ತಮ್ಮನನ್ನು ಭೀಕರವಾಗಿ ಹತ್ಯೆ ಮಾಡಿದ ಅಣ್ಣ

ಪತ್ನಿಗೆ 17 ಬಾರಿ ಇರಿದು,ಆಕೆಯ ದೇಹದ ಮೇಲೆ ಕಾರು ಹತ್ತಿಸಿದ್ದ ಪಾಪಿ ಪತಿ..!,ಕೇರಳ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

ಮಲಯಾಳಂ ನಟ ಶ್ರೀಜಿತ್ ರವಿ ಬಂಧನ